ಆನೇಕಲ್ : ಕರಿಯಪ್ಪನಹಳ್ಳಿಯ ಭಾರತಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಡ ರಘು ಬಂಧಿತ ಆರೋಪಿ ಇತ್ತೀಚಿಗೆ ಕರಿಯಪ್ಪನ ಹಳ್ಳಿಯಲ್ಲಿ ಹೊಸದಾಗಿ ಮನೆ ನಿರ್ಮಿಸಿದರು. ಈ ವೇಳೆ ಗಾರೆ ಮೇಸ್ತ್ರಿ ಮಂಜು ಎಂಬವವನ ಜೊತೆ ಭಾರತಿ ಸಲಿಗೆ ಹೊಂದಿದ್ದಳು ಭಾರತಿ ನಡತೆ ಸರಿ ಮಾಡಿಕೊಳ್ಳಲು ಗಂಡ ರಘು ಸಲಹೆ ನೀಡಿದ್ದರು.
ಆದರೆ ಆಕೆ ಮಾತ್ರ ಆತನ ಸವಾಸ ಬಿಟ್ಟಿರಲಿಲ್ಲ ಇದೇ ವಿಚಾರಕ್ಕೆ ಶನಿವಾರ ರಾತ್ರಿ ಗಲಾಟೆ ಶುರುವಾಗಿತ್ತು ನಾನೇ ಉಸಿರುಗಟ್ಟಿ ಕೊಲೆ ಮಾಡಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಇದೀಗ ಆರೋಪಿಯನ್ನು ಜೈಲು ಪಾಲಾಗಿದ್ದಾನೆ.
PublicNext
24/01/2022 09:04 pm