ಬೆಂಗಳೂರು: ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ತರಿಸಿಕೊಂಡು, ಯುವಕರನ್ನೇ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ಆಂಧ್ರದ ವಿಕೋಟಾ ಮೂಲದ ಮೊಯಿನ್ ( 28 ), ಹೊಸಕೋಟೆಯ ರಿಯಾಜ್ ( 40 ) ಬಂಧಿತರು.
ಬೆಂ. ಉತ್ತರ ತಾಲ್ಲೂಕು ತಮ್ಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿಆಂಧ್ರ ವಿಕೋಟಾದಿಂದ ಗಾಂಜಾ ತರಿಸುತ್ತಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಮಾದನಾಯಕನಹಳ್ಳಿ ಠಾಣೆ ಸಿಪಿಐ ಬಿ.ಎಸ್.ಮಂಜುನಾಥ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳ ಸಹಿತ 3 ಕೆ.ಜಿ. ಗಾಂಜಾ ವಶಪಡಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PublicNext
22/01/2022 10:09 pm