ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮದುವೆಯಾಗಿ 50 ದಿನಕ್ಕೆ ಕಟ್ಟಡದಿಂದ ಜಿಗಿದು ನವ ವಿವಾಹಿತೆ ಆತ್ಮಹತ್ಯೆ

ಬೆಂಗಳೂರು: ಮದುವೆಯಾಗಿ ಇನ್ನೂ ಎರಡು ತಿಂಗಳೂ ಕಳೆದಿಲ್ಲ, ಮದುವೆ ಸಂಭ್ರಮದ ಕಳೆ ಮಾಸುವ ಮುನ್ನವೇ ಮನೆಯಲ್ಲಿ ಸಾವಿನ‌ ಸೂತಕ ಆವರಿಸಿದೆ‌.

Yes ನಿನ್ನೆ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ 23 ವರ್ಷದ ಗೀತಾ ಕಳೆದ 50 ದಿನಗಳ ಹಿಂದಷ್ಟೇ ಶ್ರೀಕಾಂತ್ ನನ್ನ ಮದುವೆಯಾಗಿದ್ಲು. ಗಂಡನ ಮನೆಯಲ್ಲೆ ಮಗಳು ಸುಖಾವಾಗಿದ್ದಾಳೆ ಅಂತ ಅಂದುಕೊಂಡಿದ್ದ ಗೀತಾ ತಂದೆ ತಾಯಿಗೆ ನಿನ್ನೆ ಸಂಜೆ ಆಘಾತವಾಗಿತ್ತು. ಯಾಕಂದ್ರೆ ಮಗಳು ಕಟ್ಟಡದ ಮೇಲಿಂದ ಬಿದ್ದು ಆಸ್ಪತ್ರೆ ಸೇರಿದ್ಲು. ಇಂದು ಚಿಕಿತ್ಸೆ ಫಲಕಾರಿಯಾಗದೆ ಗೀತ ಸಾವನ್ನಪ್ಪಿದ್ದಾಳೆ.

ಗೀತಾ ಸಾವಿಗೆ ಗಂಡ ಶ್ರೀಕಾಂತ್ ಮತ್ತು ಮನೆಯವರೆ ಕಾರಣ ಅಂತ ಗೀತಾ ಪೋಷಕರು ಆರೋಪಿಸಿದ್ದಾರೆ.

ಮೂಲತಃ ಗೀತಾ ಗುಬ್ಬಿಯವಳಾಗಿದ್ದು, ನಿನ್ನೆ ಗಂಡನ ಮನೆಯಲ್ಲಿ ಗಲಾಟೆ ಮಾಡಿಕೊಂಡು ಕಟ್ಟದಿಂದ‌ ಕೆಳಗೆ ಹಾರಿರೋದಾಗಿ ತಿಳಿದು ಬಂದಿದೆ. ಗೀತಾ ಸಾವಿನ ಹಿನ್ನೆಲೆ ಗೀತಾ ಗಂಡ ಶ್ರೀಕಾಂತ್ ಹಾಗೂ ಕುಟುಂಬಸ್ಥರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿಯಲ್ಲಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Edited By : Nagesh Gaonkar
PublicNext

PublicNext

22/01/2022 09:00 pm

Cinque Terre

38.33 K

Cinque Terre

1