ಬೆಂಗಳೂರು: ಸಂಕ್ರಾಂತಿ ಹಬ್ಬದ ದಿನ ಎಲ್ರೂ ಎಳ್ಳು ಬೆಲ್ಲ ಸವಿತಿದ್ರೆ, ಆತ ಮಾತ್ರ ದೊಡ್ಡ ಮಟ್ಟದಲ್ಲಿ ಬ್ಯಾಂಕ್ ರಾಬರಿ ಮಾಡೋಕೆ ಭರ್ಜರಿ ಪ್ಲಾನ್ ಹಾಕೊಂಡಿದ್ದ. ಎಸ್ ಕಳೆದ ವಾರ ಮಡಿವಾಳ ಠಾಣಾ ವ್ಯಾಪ್ತಿಯ ಎಸ್ ಬಿ ಐ ಬ್ಯಾಂಕ್ ನಲ್ಲಿ ನಡೆದ ರಾಬರಿ ಪ್ರಕರಣ ಇದು. ಸಂಜೆ ವೇಳೆಗೆ ಬ್ಯಾಂಕ್ ಗೆ ಒಬ್ಬನೇ ಚಾಕು ಹಿಡಿದು ಬಂದಿದ್ದ ಆರೋಪಿ ಇಬ್ಬರು ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿ ತಿಜೋರಿ ಯಲ್ಲಿದ್ದ ನಾಲ್ಕು ಲಕ್ಷ ನಗದು ಹಾಗೂ ಚಿನ್ನಾಭರಣವನ್ನ ತುಂಬಿಕೊಂಡು ಸಲೀಸಾಗಿ ಎಸ್ಕೇಪ್ ಆಗಿದ್ದ.
ಇತ್ತ ಬ್ಯಾಂಕ್ ರಾಬರಿ ವಿಷಯ ತಿಳಿದು ಪೊಲೀಸ್ರು ದಂಗಾಗಿದ್ರು, ಹಬ್ಬದ ದಿನವೇ ಬ್ಯಾಂಕ್ ರಾಬರಿ ಆಗಿದ್ರಿಂದ ಗಾಬರಿಗೊಂಡ ಅಧಿಕಾರಿಗಳು ಸ್ಪಾಟ್ ವಿಸಿಟ್ ಮಾಡಿ ಪರಿಶೀಲನೆ ನಡೆಸಿದ್ರು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇನ್ವೆಸ್ಟೀಗೇಷನ್ ಶುರುಮಾಡಿದ್ದ ಎಸಿಪಿ ಸುಧೀರ್ ಹೆಗ್ಡೆ ಅಂಡ್ ಟೀಂ ಘಟನೆ ನಡೆದ ಒಂದು ವಾರಕ್ಕೆ ಆರೋಪಿಯನ್ನ ಪತ್ತೆ ಮಾಡಿದ್ದಾರೆ.
ಎಂಜಿನಿಯರ್ ಉದ್ಯೋಗಿಯಾಗಿರುವ ಈ ಧೀರಜ್ ಬ್ಯಾಂಕ್ ರಾಬರಿ ಮಾಡಿದ ಮಹಾನ್ ಪಟ್ಟಿಂಗ. 40 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಆರೋಪಿ, ಆನ್ ಲೈನ್ ಆಪ್ ಗಳ ಮೂಲಕ ಲೋನ್ ಪಡೆದಿದ್ದ ಟ್ರೇಡಿಂಗ್ ಬ್ಯುಸಿನೆಸ್ ಗೆ ಬಿದ್ದು ಬರ್ಬಾದ್ ಆಗಿದ್ದ. ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡ್ತಿದ್ರಿಂದ ಕ್ವಿಕ್ ಆಗಿ ಹಣ ಮಾಡೋ ಆಸೆಗೆ ಬಿದ್ದು ಬ್ಯಾಂಕ್ ನಿಂದ ಹಣ ಎಗರಿಸಲು ಸ್ಕೆಚ್ ಹಾಕಿದ್ದ ಧೀರಜ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
PublicNext
22/01/2022 06:16 pm