ಆನೇಕಲ್ : ಸಾಲಾಗಿ ನಿಂತಿರೋ ಬೈಕ್ ಗಳು...ಮಿರ ಮಿರ ಮಿಂಚ್ತಾಯಿರೋ ಚಿನ್ನಾಭರಣ... ಎಲ್ಲಪ್ಪಾ ಈ ಎಕ್ಸಿಬಿಷನ್ ? ಒಂದೇ ಸೂರಿನಡಿ ಇದೆಲ್ಲ ಸಿಗುತ್ತಾ? ಛೇ..! ನಾನ್ ಇದನೆಲ್ಲ ಮಿಸ್ ಮಾಡ್ಕೊಂಡ್ನಲ್ಲ... ಅಂತ ನಿಮಗೆ ಅನ್ನಿಸ್ತಾಯಿದೆ ಅಲ್ವ? ಹಾಗೇನಾದ್ರೂ ಅಂದ್ಕೊಡ್ರೆ ಅದು ನಿಮ್ಮ ಊಹೆ ಅಷ್ಟೇ. ಇದೆಲ್ಲ ಕದ್ದು ಸಿಕ್ಕಿ ಬಿದ್ದಿರೋ ಕಳ್ಳಮಾಲುಗಳು! ಆನೇಕಲ್ ಉಪವಿಭಾಗ ಪೊಲೀಸರು ಭರ್ಜರಿ ಕಾರ್ಯಾಚರಿಸಿ ತಂದಿರುವ ವಿವಿಧ ವಸ್ತುಗಳು.
ಎಲ್ಲೆಲ್ಲಿ ಎಷ್ಟೆಷ್ಟು ಕಳ್ಳತನ ಆಗಿತ್ತು, ಎಷ್ಟೆಷ್ಟನ್ನು ಪೊಲೀಸರು ರಿಕವರಿ ಮಾಡಿದ್ದಾರೆ ಅಂತ ಹೇಳ್ತೀವಿ... ಹೆಬ್ಬಗೋಡಿ ಪೊಲೀಸರು ಕೆಲ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಮನೆ ಮುಂದೆಯೇ ಪಾರ್ಕಿಂಗ್ ಮಾಡಿದ ಮೇಲೆ ಕಳ್ಳರು ಕೈಚಳಕ ತೋರಿಸಿ 15 ಲಕ್ಷ ಮೌಲ್ಯದ 15 ಬೈಕ್ ಗಳನ್ನು ಎಗರಿಸಿದ್ದಾರೆ. ಮಹಮ್ಮದ್ ಯೂಸಫ್, ಇಬ್ರಾಹಿಂ, ಕೃಷ್ಣ ಖದೀಮರು.
ಇನ್ನು ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ ಒಂಟಿ ಮನೆಗಳ ಬೀಗ ಹೊಡೆದು ದೋಚುತ್ತಿದ್ದ ತಮಿಳುನಾಡು ಮೂಲ ಹೊಸೂರು ಗ್ರಾಮದ ನಾಗರಾಜು, ಗಣೇಶ್, ಹನುಮಂತ ಬಂಧಿತರು. ಇವರಿಂದ 35 ಲಕ್ಷ ಮೌಲ್ಯದ ಚಿನ್ನ- ಬೆಳ್ಳಿ ವಶಪಡಿಸಲಾಗಿದೆ. ಸರ್ಜಾಪುರ ಠಾಣೆ ವ್ಯಾಪ್ತಿಯ ಅಂಗಡಿಗಳಲ್ಲಿ ಕಳವು ಮಾಡಿದ ಆರೋಪಿಗಳಿಂದ 25 ಲಕ್ಷ ಮೌಲ್ಯದ ಒಡವೆ, 12.50 ಲಕ್ಷ ಪ್ಲಂಬಿಂಗ್ ಸಾಮಗ್ರಿ, 3.5 ಲಕ್ಷ ನಗದು ಸಹಿತ ಬಂಧಿಸಲಾಗಿದೆ.
ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿ 15 ಲಕ್ಷ ಮೌಲ್ಯದ ಬೈಕ್ ಗಳನ್ನು ವಶಪಡಿಸಲಾಗಿದೆ. ಒಟ್ಟಾರೆ ಆನೇಕಲ್ ಉಪ ವಿಭಾಗದ ಎಲ್ಲ ಪೊಲೀಸರು ಸೇರಿ ಒಂದು ಕೋಟಿ ರೂ. ಗೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿ, ಕಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Kshetra Samachara
22/01/2022 06:02 pm