ಯಲಹಂಕ: ಇತ್ತೀಚೆಗೆ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಯಾವ ಕಾರಣಕ್ಕೆ ಕೊಲೆ ಆಗ್ತಿದೆ? ಯಾರು ಮಾಡಿದರು ಎಂಬುದನ್ನ ಕೇಳಿದರೆ ಯಾರನ್ನು ನಂಬುವುದೋ ಬಿಡುವುದೋ ಗೊತ್ತಾಗಲ್ಲ. ದೇಹದ ಕಾಯಿಲೆ ವಾಸಿ ಮಾಡಿಕೊಳ್ಳಲು ಯಲಹಂಕ ಸಮೀಪದ ಕಟ್ಟೆಗೇನಹಳ್ಳಿ ವಾಸಿ ಸಿದ್ದಮ್ಮ ಪಕ್ಕದಮನೆಯ ಸಲೀಂ ಎಂಬುವವರ ಮನೆಗೆ ನಿನ್ನೆ ಮಧ್ಯಾಹ್ನ ತೆರಳಿದ್ದರು.
ಅದೇನಾಯ್ತೋ ಏನೋ ನಿನ್ನೆ ಬೆಳಗ್ಗೆ ಸಲೀಂ ಮನೆ ಕಡೆಗೆ ಹೋಗಿದ್ದ ಸಿದ್ದಮ್ಮ ಸಂಜೆಯಾದರೂ ವಾಪಸ್ಸಾಗಿರಲಿಲ್ಲ. ಸಹಜವಾಗಿ ಸಲೀಂ ಮನೆ ಕಡೆ ಬಂದು ಪರಿಶೀಸಿದಾಗ ಸಿದ್ದಮ್ಮಳ ಮೃತ ದೇಹ ಸಲೀಮ್ ಮನೆಯಲ್ಲೇ ಪತ್ತೆಯಾಗಿತ್ತು.
ಸಲೀಂ ಎಂಬಾತನೇ ಈ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊಲೆಯಾದ ಸಿದ್ದಮ್ಮ ಹಾಗೂ ಸಲೀಂ ನಡುವೆ ಹಣದ ವ್ಯವಹಾರ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕೊಲೆ ನಂತರ ನಿನ್ನೆ ಸಂಜೆಯಿಂದ ಆರೋಪಿ ಸಲೀಂ(50) ನಾಪತ್ತೆಯಾಗಿದ್ದಾನೆ. ಆರೋಪಿಗಾಗಿ ಯಲಹಂಕ ಪೊಲೀಸರು ಶೋಧಾಕಾರ್ಯ ಮುಂದುವರೆಸಿದ್ದಾರೆ. ಅದೇನೆ ಇರಲಿ ಆರೊಗ್ಯ ಸರಿಡಿಸಿಕೊಳ್ಳಲು ವೈದ್ಯ ಸಲೀಂ ಬಳಿ ಹೋಗಿದ್ದ ಮಹಿಳೆ ಶವವಾಗಿ ಹೊರಬಂದಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
PublicNext
22/01/2022 11:29 am