ಆನೇಕಲ್ :ಆನೇಕಲ್ ಉಪವಿಭಾಗದ ಪೊಲೀಸ್ ಠಾಣೆಗಳ ಸುತ್ತಮುತ್ತ ಕಳ್ಳರ ಕೈಚಳಕವನ್ನ ಮುಂದುವರೆಸಿದ್ದಾರೆ. ಕಳೆದ ಮೂರು ದಿನಗಳಿಂದ ಐಷರಾಮಿ ಬೈಕ್ ಗಳಾದ ರಾಯಲ್ ಎನ್ಫೀಲ್ಡ್ ಕೆಟಿಎಂ R15 ಬೈಕ್ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಅತ್ತಿಬೆಲೆ ಸರ್ಜಾಪುರ ಪೊಲೀಸ್ ಠಾಣೆ ಭಾಗದಲ್ಲಿ ಮೂರು ದಿನಗಳಿಂದ ಮನೆ ಮುಂದೆ ನಿಲ್ಲಿಸಿದ ಬೈಕ್ ಗಳನ್ನು ಕದ್ದು ಕತರ್ನಾಕ್ ಗ್ಯಾಂಗ್ ಎಸ್ಕೇಪ್ ಆಗಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮ ಪಂಚಾಯಿತಿ ತ್ಯಾವಕನಹಳ್ಳಿ ಗ್ರಾಮದ ನಿವಾಸಿ ಶಂಕರ ಎಂಬವರಿಗೆ ಸೇರಿದ ಬೈಕ್ ನೆನ್ನೆ ರಾತ್ರಿ ಮನೆಮಂದೆ ನಿಲ್ಲಿಸಿದ್ದಾಗ ಕಳ್ಳತನ ಮಾಡಿದ್ದಾರೆ ಕಳ್ಳರ ಕರಾಮತ್ತು ಸಿಸಿಟಿವಿ ಸೆ ರಿಯಾಗಿದ್ದು ಅದನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆಯಲಾಗಿದೆ ಇನ್ನು ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Kshetra Samachara
22/01/2022 10:22 am