ಬೆಂಗಳೂರು: ಸಿಎಂ ನಿವಾಸದ ಬಳಿಯೇ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಕೋರಮಂಗಲ ಪೊಲೀಸ್ ಸಿಬ್ಬಂದಿ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸದ ಆರೋಪದಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಆರ್ ಟಿ ನಗರ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಮತ್ತು ಪಿಎಸ್ ಐ ವೀರಭದ್ರ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತರು
ಆದೇಶ ಹೊರಡಿಸಿದ್ದಾರೆ.
ಇಂತಹ ಸಿಬ್ಬಂದಿಯ ಪೂರ್ವಪರ ಪರಿಶೀಲನೆ ನಡೆಸದೆ ಸಿಎಂ ನಿವಾಸಕ್ಕೆ ನಿಯೋಜನೆ ಮಾಡಿದ್ದ ಕಾರಣ ಸೌತ್ ಈಸ್ಟ್ ಡಿಸಿಪಿ ಶ್ರೀನಾಥ್ ಜೋಶಿ ಅವರಿಗೆ ಮೆಮೊ ನೀಡಿದ ಕಮಿಷನರ್, ಸಿಎಂ ನಿವಾಸದ ಭದ್ರತೆಯಲ್ಲಿ ಹಾಗೂ ನಿಯೋಜಿತ ಸಿಬ್ಬಂದಿ ಮೇಲೆ ನಿಗಾ ಹಾಗೂ ಸೂಕ್ತ ರೀತಿ ಭದ್ರತೆ ನೀಡದಿರೋ ಕಾರಣ ವಿಐಪಿ ಡಿಸಿಪಿ ಮಂಜುನಾಥ್ ಬಾಬುಗೂ ಮೆಮೊ ನೀಡಿದ ಕಮಿಷನರ್ ಅವರು, ಇಬ್ಬರೂ ಡಿಸಿಪಿಗಳಿಗೆ ಮೆಮೊಗೆ ಉತ್ತರ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಒಂದು ಕಡೆ ಅಶ್ವತ್ ಗೌಡ ಅಮಾನತ್ತಿಗೆ ಇಲಾಖೆಯಲ್ಲೇ ಬೇಸರ ವ್ಯಕ್ತವಾಗಿದೆ. ಪೊಲೀಸ್ರ ವಿರುದ್ಧ ಕೇಸ್ ಮಾಡಿದ್ದಕ್ಕೆ ಇನ್ಸ್ಪೆಕ್ಟರ್ ಗೆ ಶಿಕ್ಷೆ ಕೊಟ್ಟಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಈ ಪ್ರಕರಣ ಕುರಿತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಭದ್ರತೆ ಕುರಿತು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಮುಜುಗರಕ್ಕೊಳಗಾಗಿದ್ದ ಇಲಾಖೆಯು ಸದ್ಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದೆ.
PublicNext
19/01/2022 04:56 pm