ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿನ್ನ ಬೆಳ್ಳಿ ಬಿಟ್ಟು ವಾಚ್ ಗಳಿಗೆ ಕನ್ನ ಹಾಕಿದ ಖದೀಮರು ಅಂದರ್

ಬೆಂಗಳೂರು: ನಡು ರಾತ್ರಿಯಲ್ಲಿ ಅಂಗಡಿ ಶೆಟರ್ ಮುರಿದು ಕಳ್ಳತನ ಪ್ಲಾನ್ ಮಾಡ್ತಾರೆ ಅಂದ್ರೆ ಅದು ಚಿನ್ನದಂಗಡಿಯೋ ಇಲ್ಲ ಅಲ್ಲಿ ಹಣ ಇರೋ ತಿಜೋರಿಯೋ ಇರ್ಬೇಕು.ಆದ್ರೆ ಇಲ್ಲೋನ್ಬ ಅದನ್ನೆಲ್ಲ ಬಿಟ್ಟು ವಾಚ್ ಅಂಗಡಿಗೆ ಕನ್ನ ಹಾಕಿದ್ದ.

ಎಸ್ ಇಂದಿರಾನಗರ ವಾಚ್ ಶೋರೂಮ್ ಕಳ್ಳನೊಬ್ಬ ಕದ್ದಿದ್ದು ಬರೋಬ್ಬರಿ ಎರಡು ಕೋಟಿ ಬೆಲೆಬಾಳುವ ವಾಚ್ ಗಳನ್ನ. ಕೋಟಿ ಕೋಟಿ ಬೆಲೆಯ ವಾಚ್ ಗಳನ್ನು ಕದ್ದಿದ್ದ ಬಿಹಾರ ಗ್ಯಾಂಗ್ ಪ್ರಮುಖ ಆರೋಪಿ ಅಖ್ತರ್ ನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಇಂದಿರಾನಗರದ ಸಿಮನ್ಸ್ ಟೈಮ್ಸ್ ಶಾಪ್ ನಲ್ಲಿಇದೇ ತಿಂಗಳು 4 ರಂದು ಅಂಗಡಿಯಲ್ಲಿ ಖದೀಮರು ನುಗ್ಗಿ 129 ರಾಡೋ , 29 ಲಾಂಜಿನ್ , 13 ಒಮೇಗಾ ಕಂಪನಿಯ ವಾಚ್ ಗಳನ್ನು ದೋಚಿ ಪರಾರಿಯಾಗಿದ್ದರು. ಇವುಗಳ ಒಟ್ಟು ಬೆಲೆ ಎರಡು ಕೋಟಿ. ವಾಚ್ ಕಳುವಾದ ಬಗ್ಗೆ ಇಂದಿರಾನಗರ ಠಾಣೆಗೆ ದೂರು ನೀಡಿದ್ರು.ದೂರು ದಾಖಲಾದ ಹಿನ್ನೆಲೆ ಇನ್ಸ್ಪೆಕ್ಟರ್ ಹರೀಶ್, ಸಬ್ ಇನ್ ಸ್ಪೆಕ್ಟರ್ ಅಮರೇಶ್ ಜೇಗರಕಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಎರಡು ಕೋಟಿ ಮೌಲ್ಯದ ವಾಚ್ ಗಳನ್ನ ಸೀಜ್ ಮಾಡಿ ಮಾಲಿಕರಿಗೆ ಮರಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

12/01/2022 08:07 pm

Cinque Terre

390

Cinque Terre

0

ಸಂಬಂಧಿತ ಸುದ್ದಿ