ಬೆಂಗಳೂರು : ಸಿಂಥೆಟಿಕ್ ಡ್ರಗ್ ಅಂದ್ರೆ ನಮಗೆ ನೆನಪಾಗೋದೆ ವಿದೇಶಗಳೂ.ಅಲ್ಲಿ ತಯಾರಾಗೋ ಸಿಂಥೆಟಿಕ್ ಡ್ರಗ್ ಗೆ ಇಲ್ಲಿ ಸಾಕಷ್ಟು ಬೇಡಿಕೆ ಇದೆ. ವಿದೇಶದಿಂದ ಡ್ರಾಲ್ ವೆಬ್ ಮೂಲಕ ಡ್ರಗ್ ಮಾರೋಟ ಮಾಡೋದು ಕಾಮನ್. ಆದ್ರೆ ನಗತದಲ್ಲಿ ಮಿನಿ ಡ್ರಗ್ ಫ್ಯಾಕ್ಟರಿ ಓಪನ್ ಮಾಡಿ ಕೋಟಿ ಕೋಟಿ ಬೆಲೆಯ ಡ್ರಗ್ ತಯಾರು ಮಾಡ್ತಿದ್ದ ಜಾಲವನ್ನು ಸಿಸಿಬಿ ಪೊಲೀಸ್ರು ಪತ್ತೆ ಹಚ್ಚಿದ್ದಾರೆ.
ಸಿಸಿಬಿ ಆ್ಯಂಟಿ ನಾರ್ಕೋಟಿಕ್ ವಿಂಗ್ ಇನ್ಸ್ ವಿರೂಪಾಕ್ಷ ಅಂಡ್ ಟೀಂ ಈ ಡ್ರಗ್ ಫ್ಯಾಕ್ಟರಿಯನ್ನ ಸೀಜ್ ಮಾಡಿ ಒರ್ವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ನಗರದ ಸೋಲದೇವನಹಳ್ಳಿಯಲ್ಲಿ ಇಬ್ಬರು ಆಫ್ರಿಕನ್ ಪ್ರಜೆಗಳು ಈ ಡ್ರಗ್ ಫ್ಯಾಕ್ಟರಿ ನಡೆಸ್ತುದ್ರು. ಮನೆಯಲ್ಲೆ ರಾಸಯನಿಕ ಬಳಸಿ ಬೆಲಬಾಳುವ ಎಂಡಿಎಂಎ ಕ್ರಿಸ್ಟಲ್ ತಯಾರು ಮಾಡ್ತಿದ್ರು. ಇನ್ನು ಇವ್ರು ತಯಾರು ಮಾಡ್ತಿದ್ದ ರೀತಿಗೆ ಪೊಲೀಸ್ರೇ ಶಾಕ್ ಆಗಿದ್ದಾರೆ. ಪ್ರೆಶರ್ ಕುಕ್ಕರ್ ನಲ್ಲಿ ರಾಸಾಯನಿಕ ಬಳಸಿ ಅದನ್ನು ಕುದಿಸಿ ಅದ್ರಿಂದ ಬರುವ ಆವಿಯಿಂದ ಎಂಡಿಎಂಎ ಕ್ರಿಸ್ಟಲ್ ತಯಾರಯ ಮಾಡ್ತಿದ್ರು.
ಹೀಗೆ ತಯಾರಾದ ಕ್ರಿಸ್ಟಲ್ ಕಚ್ಚಾ ಎಂಡಿಎಂಎ ಕ್ರಿಸ್ಟಲ್‌ಆಗಿದ್ದಯ ಡ್ರಗ್ ಮಾರ್ಕೇಟ್ ನಲ್ಲಿ ಸಾಕಷ್ಟು ಬೇಡಿಕೆಯಿದೆಯಂತೆ. ವಿದೇಶದಿಂದ ಕಚ್ಚಾವಸ್ತುಗಳನ್ನು ಕೊರಿಯರ್ ಮೂಲಕ ತರಿಸಿ ಇಲ್ಲಿ ಆ ರಾಸಾಯನಿಕ ಗಳನ್ನು ಕುಕ್ಕರ್ ನಲ್ಲಿ ಕುದಿಸಿ ಡ್ರಗ್ ತಯಾರು ಮಾಡ್ತಿದ್ದ ಎಂದು ತಿಳಿದು ಬಂದಿದೆ.
ಸದ್ಯ ಆಫ್ರಿಕ್ ಪ್ರಜೆ ಹಿನ್ನೆಲೆ ಗೊತ್ತಾಗಿದ್ದು, ಇವನ ಹೆಸ್ರು ರಿಚರ್ಡ್,ಈತ ೨೦೧೯ರಲ್ಲಿ ಇಂಡಿಯಾಗೆ ಬ್ಯುಸಿನೆಅ್ ವಿಸಾದಲ್ಲಿ ಬಂದು ಡ್ರಗ್ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ. ಮನೆಯಲ್ಲಿ ತಯಾರದ ಡ್ರಗ್ ನ ಕಾಲೇಜು ಹಾಗೂ ದೊಡ್ಡ ದೊಡ್ಡ ಪಾರ್ಟಿಗಳಿಗೆ ಸಪ್ಲೈ ಮಾಡ್ತಿದ್ದ ಎಂದು ತಿಳಿದದು ಬಂದಿದೆ.
ಸದ್ಯ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಇದ್ರಿಂದಡ ಮತ್ತೆ ಯಾರೆಲ್ಲಾ ಶ್ಯಾಮೀಲಾಗಿದ್ದಾರೋ ಅವ್ರಿಗೂ ಬಲೆ ಬೀಸಿದ್ದಾರೆ. ಸದ್ಯ ಬಂದಿತನಿಂದ ಡ್ರಗ್ ತಾಯಾರಿಗೆ ಬಳಸುತ್ತಿದ್ದ ಉಪಕರಣಗಳ ಜೊತೆಗೆ 50ಲಕ್ಷ ಮೌಲ್ಯದ 900ಗ್ರಾಂ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
PublicNext
11/01/2022 01:58 pm