ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಳ್ಳಂಬೆಳಗ್ಗೆ ಸಿಡಿದ ಪೊಲೀಸ್‌ ಗುಂಡು; ರೌಡಿ ನರಸಿಂಹ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಗನ್ನು ಮತ್ತೆ ಸದ್ದು ಮಾಡಿದೆ. ಪೊಲೀಸ್ರು ಗನ್‌ ಗೆ ಕೆಲಸ ಕೊಟ್ಟಿದ್ದಾರೆ ಅಂದ್ರೆ ಅಲ್ಲೊಬ್ಬ ಕ್ರಿಮಿನಲ್ ನ ಹೆಡೆಮುರಿ ಕಟ್ಟಿದ್ದಾರೆ ಅಂತಲೇ ಅರ್ಥ. ಎಸ್, ನಟೋರಿಯಸ್

ರೌಡಿಶೀಟರ್ ನ ಬಂಧನ ವೇಳೆ ಅನಿವಾರ್ಯವಾಗಿ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲಾಗಿದೆ. ನರಸಿಂಹ @ ನರಸಿಂಹ ರೆಡ್ಡಿ ಗಿರಿನಗರ ರೌಡಿಶೀಟರ್ ಆಗಿದ್ದು, ಹಲವು ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ.

ಇಂದು ಮುಂಜಾನೆ ಹೊಸಕೆರೆ ಹಳ್ಳಿಯ ಕೆರೆಕೋಡಿ ಬಳಿ ನರಸಿಂಹ ಇರೊದು ಕನ್ಫರ್ಮ್ ಆಗಿತ್ತು. ಗಿರಿನಗರ ಸಬ್ ಇನ್‌ ಸ್ಪೆಕ್ಟರ್ ಸುನಿಲ್‌ ಕಡ್ಡಿ ಮತ್ತವರ ತಂಡ, ನರಸಿಂಹನ ಬಂಧನಕ್ಕೆ ತೆರಳಿತ್ತು. ಈ ವೇಳೆ ಕೆರೆಕೊಡಿ ಬಳಿ ಚಳಿಗೆ ಬೆಚ್ಚಗೆ ಮಲಗಿದ್ದ ನರಸಿಂಹ ಪೊಲೀಸ್ರ ಕಂಡು ಹೌಹಾರಿ ತಪ್ಪಿಸಿಕೊಳ್ಳಲು ಪೊಲೀಸ್ರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಪಿಎಸ್ ಐ ಸುನಿಲ್‌, ಏರ್ ಫೈರ್ ಮಾಡಿ ಸರೆಂಡರ್ ಆಗುವಂತೆ ವಾರ್ನ್ ಮಾಡಿದ್ರು.

ಇಷ್ಟಾದ್ರು ನರಸಿಂಹ ಮಾರಕಾಸ್ತ್ರ ಹಿಡಿದು ಪಿಎಸ್ ಐ ಮೇಲೆಯೇ ಏರಿ ಹೋದ! ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಸುನಿಲ್‌, ನರಸಿಂಹನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆ ಹಲ್ಲೆಗೆ ಒಳಗಾಗಿದ್ದ ಕಾನ್ಸ್ ಟೇಬಲ್ ಮೋಹನ್ ಹಾಗೂ ರೌಡಿ ನರಸಿಂಹನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನರಸಿಂಹ ನಗರದ ದಕ್ಷಿಣ, ಆಗ್ನೇಯ, ಪಶ್ಚಿಮ ವಿಭಾಗದಲ್ಲಿ 30ಕ್ಕೂ ಹೆಚ್ಚು ಕೇಸ್ ಗಳಲ್ಲಿ ಭಾಗಿಯಗಿದ್ದ.‌ ಪ್ರಮುಖವಾಗಿ ಪೇಪರ್ ಬಿಡ್ಡ, ಶಿವನ ಕೊಲೆ ಕೇಸ್ ಸಹಿತ ಕಿಡ್ನ್ಯಾಪ್ ಕೇಸ್ ನಲ್ಲೂ ನರಸಿಂಹ ಭಾಗಿಯಾಗಿದ್ದಾನೆ.

Edited By : Shivu K
PublicNext

PublicNext

11/01/2022 01:47 pm

Cinque Terre

30.56 K

Cinque Terre

0