ಬೆಂಗಳೂರು: ಸಚಿವ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್ ಕೇಸ್ ತನಿಖೆ ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದು, ಈವರೆಗೆ 8 ಮಂದಿಯ ಹೇಳಿಕೆ ಪಡೆದಿರೋ ಸಿಸಿಬಿ, ಆರೋಪಿ ರಾಹುಲ್ ಭಟ್ ನನ್ನು ಬಂಧಿಸಿ ಆತನ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲವು ಡೇಟಾ ಡಿಲಿಟ್ ಆಗಿರೋ ಶಂಕೆಯಿದ್ದು, ಡೇಟಾ ರಿಟ್ರೀವ್ ಮಾಡಲು ಪೊಲೀಸರು ಮೊಬೈಲ್ ಎಫ್ಎಸ್ಎಲ್ ಗೆ ರವಾನಿಸಿದ್ದಾರೆ.
ಎಸಿಪಿ ಜಗನ್ನಾಥ ರೈ ನೇತೃತ್ವದ ತಂಡ ರಾತ್ರಿಯಿಡೀ ರಾಹುಲ್ ನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾರೆ. ಪ್ರಕರಣದಲ್ಲಿ ರಾಹುಲ್ ಅಲ್ಲದೆ 8 ಮಂದಿಯ ಹೇಳಿಕೆ ದಾಖಲಿಸಲಾಗಿದೆ. ಸಚಿವ ಸೋಮಶೇಖರ್ ಪಿಎ ಭಾನುಪ್ರಕಾಶ್, ಶ್ರೀನಿವಾಸ್ ಗೌಡ, ಸೋಮಶೇಖರ್ ಪುತ್ರ ನಿಶಾಂತ್, ಇಂಡಿ ಶಾಸಕ ಯಶವಂತರಾಯ ಪಾಟೀಲ್, ವಿದೇಶದಲ್ಲಿರೋ ಶಾಸಕರ ಪುತ್ರಿಯ ಹೇಳಿಕೆಯನ್ನು ಪೊಲೀಸರು ಫೋನ್ ನಲ್ಲೇ ಪಡೆದಿದ್ದಾರೆ.
ರಾಹುಲ್ ಭಟ್ ಗೆ ಒಟಿಪಿ ಕೊಟ್ಟಿದ್ದ ರಾಕೇಶ್ ಅಪ್ಪಣ್ಣನವರ್ ಹೇಳಿಕೆಯನ್ನೂ ಪೊಲೀಸರು ಪಡೆದಿದ್ದಾರೆ. ರಾಕೇಶ್ ನ ವಶಕ್ಕೆ ಪಡೆದ ವೇಳೆ ರಾಕೇಶ್ ಮೊಬೈಲ್ ನಲ್ಲಿ ಒಂದಷ್ಟು ಡೇಟಾ ಡಿಲಿಟ್ ಆಗಿರೋ ಅನುಮಾನವನ್ನು ಪೊಲೀಸ್ರು ವ್ಯಕ್ತಪಡಿಸಿದ್ದಾರೆ. ರಾಹುಲ್ ವಿದೇಶದಲ್ಲಿದ್ದುಕೊಂಡೇ ನಿಶಾಂತ್ ಗೆ ಮೆಸೇಜ್ ಮಾಡಿರೋ ಸಾಧ್ಯತೆಯಿದೆ. ಆದ್ರೆ ಸಾಕ್ಷ್ಯ ಸಿಕ್ಕಿಲ್ಲ.
ಸಾಕ್ಷ್ಯಾಧಾರ ಸಂಗ್ರಹಿಸಲು ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸ್ಕ್ರೀನ್ ಶಾಟ್ ಪರಿಶೀಲಿಸಲಾಗುತ್ತಿದೆ. ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ಇದರ ಹಿಂದಿನ ಅಸಲಿಯತ್ತೇನು? ಅನ್ನೋದು ಇನ್ನೂ ನಿಗೂಢವಾಗಿದೆ.
PublicNext
11/01/2022 11:53 am