ವರದಿ: ಶ್ರೀನಿವಾಸ್ ಚಂದ್ರ
ಬಾಗಲಗುಂಟೆ: ಕೊರೊನಾ ಕಾಲದಲ್ಲಿ ಆರ್ಥಿಕವಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ರು. ಅದ್ರಲ್ಲೂ ಟ್ರಾವೆಲ್ ಬಿಸಿನೆಸ್ ಅಂತೂ ನೆಲಕಚ್ಚಿತ್ತು. ಈ ಸಂದರ್ಭ ಕೊರೊನಾ ಡ್ಯೂಟಿಗೆಂದು ಸಾಕಷ್ಟು ಖಾಸಗಿ ಟ್ರಾವೆಲ್ ಏಜೆನ್ಸಿಗಳಿಗೆ ಟೆಂಡರ್ ನೀಡಿ ವಾಹನಗಳನ್ನು ಬಾಡಿಗೆ ಪಡೆದಿತ್ತು ಆರೋಗ್ಯ ಇಲಾಖೆ. ಇದನ್ನೇ ಬಂಡವಾಳ ಮಾಡಿಕೊಂಡು ಖದೀಮರು ಕಾರುಗಳನ್ನೇ ಕದ್ದಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಬಾಗಲಗುಂಟೆ ಪೊಲೀಸ್ರು ಆರ್.ಎಸ್.ಟ್ರಾವೆಲ್ಸ್ ಮಾಲೀಕ ಶಿವಕುಮಾರ್ ಸೇರಿ ಶಿವಕುಮಾರ್, ಕೃಷ್ಣೇಗೌಡ, ಶ್ರೀಕಾಂತ್, ಅಸ್ಗರ್ ಎಂಬವರನ್ನು ಬಂಧಿಸಿದ್ದಾರೆ. ಬಾಗಲುಗುಂಟೆಯಲ್ಲಿ ಆರ್.ಎಸ್.ಟ್ರಾವೆಲ್ಸ್ ಹೆಸರಲ್ಲಿ ಕಚೇರಿ ತೆರೆದಿದ್ದ ದಾವಣಗೆರೆ ಮೂಲದ ಶಿವಕುಮಾರ್, ಇದೇ ಕಚೇರಿಯಲ್ಲಿ ಕೃಷ್ಣೇಗೌಡ ಮ್ಯಾನೇಜರ್ , ಶ್ರೀಕಾಂತ್ ಸೂಪರ್ ವೈಸರ್ ಆಗಿದ್ರು. ಆದರೆ, ನ. 21 ರಂದು ಕಚೇರಿ ಖಾಲಿ ಮಾಡ್ಕೊಂಡು ಎಲ್ಲರೂ ಎಸ್ಕೇಪ್ ಆಗಿದ್ದರು.
106 ಕಾರುಗಳ ಸಮೇತ ಪರಾರಿ ಆಗಿದ್ದ ಈ ಕಳ್ಳರನ್ನು ಬೆಂಗಳೂರು ಪೊಲೀಸ್ರು ಮುಂಬೈನಲ್ಲಿ ಬಂಧಿಸಿ ಕರೆತಂದಿದ್ದು, 70ಕ್ಕೂ ಹೆಚ್ಚು ಕಾರುಗಳನ್ನು ಸೀಜ್ ಮಾಡಿದ್ದಾರೆ. ಸದ್ಯ ಜೈಲಿನಲ್ಲಿರೋ ಶಿವಕುಮಾರ್ ಬಿಸಿನೆಸ್ ಲಾಸ್ ಆಗಿ ಈ ಕೃತ್ಯವೆಸಗಿರೋದಾಗಿ ಹೇಳಿಕೊಂಡಿದ್ದಾನೆ. 106 ಕಾರುಗಳ ಪೈಕಿ 75 ಕಾರುಗಳನ್ನು ಪೊಲೀಸ್ರು ರಿಕವರಿ ಮಾಡಿದ್ದಾರೆ.
Kshetra Samachara
06/01/2022 03:23 pm