ಬೆಂಗಳೂರು:ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಅಟ್ಯಾಕ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ದರೋಡೆ ಕೋರನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದರೋಡೆ ಕೋರ ದಿವಾಕರ್ ಈಗಾಗಲೇ ಏಳು ಕೇಸ್ ನಲ್ಲಿ ಬೇಕಾಗಿದ್ದಾನೆ. ಆದರೆ ಕಳೆದ ತಿಂಗಳು 29 ರಂದು ದಿವಾಕರ್ ಯಶವಂತಪುರನಲ್ಲಿ ಮನೆಯೊಂದಕ್ಕೆ ನುಗ್ಗಿ ಹಣೆ ಮೇಲೆ ಪಿಸ್ತೂಲ್ ಇಟ್ಟು ಡಕಾಯಿತಿಗೆ ಮಾಡಿದ್ದ. ಈ ಸಂಬಂಧ ಅರೆಸ್ಟ್ ಮಾಡಲು ಹೋಗಿದ್ದ ಪಿಎಸ್‌ಐ ಮೇಲೂ ದಿವಾಕರ್ ಅಟ್ಯಾಕ್ ಮಾಡಿ ಚಾಕುವಿನಿಮದ ಇರಿದಿದ್ದ.
ಆದರೆ ಇಂದು ಸಂಜಯ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಾಲ್ರಾಜ್ ದಿವಾಕರನನ್ನ ಹಿಡಿದು ತಂದಿದ್ದಾರೆ. ಅಟ್ಯಾಕ್ ಮಾಡಿದಾಗ ಆತ್ಮರಕ್ಷಣೆಗೆ ದಿವಾಕರ್ ಕಾಲಿಗೂ ಗುಂಡು ಹೊಡೆದು ಹಿಡಿದು ತಂದಿದ್ದಾರೆ.
PublicNext
31/12/2021 09:09 am