ಬೆಂಗಳೂರು: ಏಕಾಏಕಿ ಖಾಸಗಿ ಕಚೇರಿಗೆ ನುಗ್ಗಿ ದರೋಡೆ ಮಾಡಿದ್ದ 8 ಜನರನ್ನಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಈಗ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಪೊಲೀಸರು 80 ಸಾವಿರ ರೂಪಾಯಿ ನಗದು 3 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ನಾಲ್ಕು ದ್ವಿ ಚಕ್ರವಾಹನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಏಕಾಏಕಿ ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದಲೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪವೂ ಈ ಬಂಧಿತರ ಮೇಲಿದೆ.
ಅನ್ನಪೂರ್ಣೇಶ್ವರಿ ನಗರದ ಠಾಣೆಯಲ್ಲಿ ಈ ಪ್ರಕರಣ ದಾಖಲು ಕೂಡ ಆಗಿದೆ.
Kshetra Samachara
27/12/2021 12:29 pm