ಬೆಂಗಳೂರು:ನಕಲಿ ನೋಟು ಚಲಾವಣೆ ಬೆಂಗಳೂರಿನಲ್ಲಿ ಅತಿ ಹೆಚ್ಚು ನಡೆಯುತ್ತಿದೆ. ಜೆರಾಕ್ಸ್ ಮಾಡಿರೋ ನೋಟನ್ನ ಚಲಾಯಿಸಿ ಯಾಮಾರಿಸಲಾಗುತ್ತಿದೆ.
ಹೌದು. ಬೆಂಗಳೂರಿನ ಬೀಡ ಅಂಗಡಿ, ಸಣ್ಣ ಹೋಟೆಲ್,ಜನರಲ್ ಸ್ಟೋರ್ ಹೀಗೆ ಸಣ್ಣಪುಟ್ಟ ಅಂಗಡಿಗಳಲ್ಲಿಯೆ ಜೆರಾಕ್ಸ್ ನೋಟ್ ಗಳನ್ನ ಚಲಾಯಿಸಲಾಗುತ್ತಿದೆ.
ಹೊರಗಿನಿಂದ ಬಂದು ಲಾಡ್ಜ್ ನಲ್ಲಿ ಉಳಿದುಕೊಂಡವರಿಂದಲೇ ಈ ಕೃತ್ಯ ನಡೆಯುತ್ತಿದೆ ಎಂದು ಶಂಕಿಸಲಾಗುತ್ತಿದೆ. ಹೆಚ್ಚು ಜನರಿರುವ ಸಮಯ ನೋಡಿಯೆ ಜೆರಾಕ್ಸ್ ನೋಟುಗಳನ್ನ ಚಲಾಯಿಸಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾಟನ್ ಪೇಟೆಯ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
PublicNext
26/12/2021 02:43 pm