ಬೆಂಗಳೂರು: ವೈಟ್ ಫೀಲ್ಡ್‌ನ ಲಿಯಾನ್ ಗ್ರಿಲ್ ರೆಸ್ಟೋರೆಂಟ್ ನಲ್ಲಿ ಇತ್ತೀಚಿಗೆ ಮಹಿಳಾ ಸಿಬ್ಬಂದಿ ಪುಡ್ ಡಿಲೇವರಿ ಬಾಯ್‌ನನ್ನ ಕತ್ತು ಹಿಡಿದು ಹೊರ ದಬ್ಬಿದ್ದರು.ಅದೇ ಘಟನೆಗೆ ಸಂಬಂಧಿಸಿದಂತೆ ಈಗ ಕನ್ನಡ ಪರ ಸಂಘಟನೆಗಳು ಫುಡ್ ಡಿಲೇವರಿ ಬಾಯ್‌ಗೆ ನ್ಯಾಯ ಕೊಡಿಸಿದ್ದಾರೆ. ಮಹಿಳಾ ಸಿಬ್ಬಂದಿ ಕ್ಷೆಮೆ ಕೇಳುವಂತೇನೂ ಮಾಡಿದ್ದಾರೆ.
ಹೌದು. ಫುಡ್ ಡೆಲಿವರಿ ಬಾಯ್ ತಡವಾಗುತ್ತಿದೆ. ರೆಸ್ಟೋರಂಟ್ ನಲ್ಲಿ ಪುಡ್ ಕೊಡ್ತಿಲ್ಲ ಅಂತಲೇ ಸಂಜಯ್ ದೂರಿದ್ದ. ಹೀಗೆ ಆದರೆ ಗ್ರಾಹಕರಿಗೆ ಫುಡ್ ಕೊಡುವುದು ತಡವಾಗುತ್ತದೆ ಅಂತಲೂ ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳಾ ಸಿಬ್ಬಂದಿ ಫುಡ್ ಡೆಲಿವರಿ ಬಾಯ್ ಅನ್ನ ಕತ್ತು ಹಿಡಿದು ಹೊರ ದಬ್ಬಿದ್ದರು.
ಈ ವೀಡಿಯೋ ವೈರಲ್ ಆಗುತ್ತಿದ್ದಂತೇನೆ ಕನ್ನಡ ಪರ ಸಂಘಟನೆಗಳು ಎಚ್ಚೆತ್ತುಕೊಂಡವು.ಫುಡ್ ಡೆಲಿವರಿ ಬಾಯ್ ಪರ ನಿಂತು ಈಗ ನ್ಯಾಯಕೊಡಿಸಿವೆ. ಅಷ್ಟೇ ಅಲ್ಲ, ಒಂದು ದಿನ ಸಂಭಾವನೆಯನ್ನೂ ಕೊಡಿಸಿವೆ. ಮಹಿಳೆಯಿಂದ ಕ್ಷಮೆಯನ್ನೂ ಕೇಳಿಸಿದ್ದಾರೆ. ಅಂದ್ಹಾಗೆ ಈ ವಿಷಯ ತಿಳಿದು ರೆಸ್ಟೋರೆಂಟ್ ಮಾಲೀಕ ಮಹಿಳಾ ಸಿಬ್ಬಂದಿಯನ್ನ ಕೆಲಸದಿಂದಲೂ ತೆಗೆದುಹಾಕಿದ್ದಾರೆ.
Kshetra Samachara
24/12/2021 10:06 am