ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಹೊಸ ವರ್ಷಕ್ಕೆ ತಂದ ಮಾದಕ ಹ್ಯಾಶ್ ಆಯಿಲ್ ಜಪ್ತಿ-ಇಬ್ಬರು ಅರೆಸ್ಟ್

ಬೆಂಗಳೂರು:ಮೈಕೋಲೇಔಟ್‌ ಪೊಲೀಸರು ಕೋಟಿ ಕೋಟಿ ಮೌಲ್ಯದ ಮಾದಕ ಹ್ಯಾಶ್ ಆಯಿಲ್ ಅನ್ನ ವಶಪಡಿಸಿಕೊಂಡಿದ್ದಾರೆ. ಆಂಧ್ರ ಮೂಲದ ಇಬ್ಬರು ಆರೋಪಿಗಳನ್ನೂ ಅರೆಸ್ಟ್ ಮಾಡಿದ್ದಾರೆ.

ಪ್ರಕಾಶ್ ಮತ್ತು ಧ್ಯಾಮ್ ರಾಜ್ ಅನ್ನೋರನ್ನೆ ಪೊಲೀಸರು ಈಗ ಬಂಧಿಸಿದ್ದಾರೆ. 6 ಕೋಟಿ ಮೌಲ್ಯದ 5 ಲೀಟರ್ ಹ್ಯಾಶ್ ಆಯಿಲ್‌ಅನ್ನ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯೋ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿಯೇ ಆರೋಪಿಗಳು ಒರಿಸ್ಸಾದಿಂದ ಈ ಹ್ಯಾಶ್ ಆಯಿಲ್ ತೆಗೆದುಕೊಂಡಿ ಬಂದಿದ್ದರು. ಹಾಗೇನೆ ಇದನ್ನ ಬಿಟಿಎಂ ಲೇಔಟ್‌ನ ಎಸ್‌ಎಲ್‌ಎನ್‌ ಲೇಕ್‌ ವ್ಯೂ ಅಪಾರ್ಟ್ಮೆಂಟ್‌ಬಳಿ ಸಂಗ್ರಹಿಸಿಟ್ಟಿದ್ದರು.

ಸದ್ಯ ಮೈಕೋಲೇಔಟ್‌ ಠಾಣೆಯಲ್ಲಿ ಪ್ರಕರಣದ ತನಿಖೆ ಮುಂದುವರೆದಿದೆ.

Edited By :
Kshetra Samachara

Kshetra Samachara

22/12/2021 10:25 am

Cinque Terre

392

Cinque Terre

0

ಸಂಬಂಧಿತ ಸುದ್ದಿ