ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಸಿಲಿಕಾನ್‌ ಸಿಟಿಯತ್ತಲೂ ಚಾಚಿದ ʼನಕಲಿ ನಂದಿನಿʼ ಕಬಂಧಬಾಹು; 270 ಕೇಸ್ ಕಲಬೆರಕೆ ತುಪ್ಪ ಪತ್ತೆ!

ನೆಲಮಂಗಲ: ಮೈಸೂರಿನಲ್ಲಿ ಕೆಎಂಎಫ್ ಹೆಸರಲ್ಲಿ ನಕಲಿ ತುಪ್ಪ ನಾನಾ ಕಡೆ ಸರಬರಾಜು ಆಗುತ್ತಿರುವ ಮಾಹಿತಿ ಹೊರಬೀಳ್ತಿದ್ದಂತೆಯೇ ಕೆಎಂಎಫ್ ನಿರ್ದೇಶಕ ಜಯರಾಮ್, ಫುಡ್ ಸೇಫ್ಟಿ ಅಧಿಕಾರಿ ಅನಸೂಯ ನೇತೃತ್ವದಲ್ಲಿ ಬೆಂಗಳೂರು ಉತ್ತರ ತಾಲೂಕು ಮಾಕಳಿ ಸಮೀಪದ ಮೆರಬೋ ಲ್ಯಾಬ್ಸ್‌ ಕಂಪನಿಗೆ ಸೇರಿದ ಡೀಲ್ ಶೇರ್ ಗೋದಾಮಿಗೆ ದಾಳಿ ನಡೆಸಿದ ತಂಡ ನಕಲಿ ತುಪ್ಪ ಪತ್ತೆ ಹಚ್ಚಿದೆ.

ಖಾಸಗಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ ನಕಲಿ ನಂದಿನಿ ತುಪ್ಪ ಕೆಎಂಎಫ್ ನ ನಂದಿನಿ ತುಪ್ಪವನ್ನೇ ಹೋಲುತ್ತಿದ್ದು, 15 ಲಕ್ಷ ಮೌಲ್ಯದ 270 ಕೇಸ್ ನಕಲಿ ತುಪ್ಪವನ್ನು ಅಧಿಕಾರಿಗಳ ತಂಡ ವಶ ಪಡಿಸಿದೆ. ಮೊನ್ನೆ ನಡೆದ ದಾಳಿಯಲ್ಲಿ ಹೊಸಕೋಟೆಯಲ್ಲಿ 7 ಕೇಸ್ ಮತ್ತು ವೈಟ್ ಫೀಲ್ಡ್ 70 ಕೇಸ್ ಪತ್ತೆಯಾಗಿತ್ತು.

ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಸಿಪಿಐ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ಮೈಸೂರಿನಲ್ಲಿ ಬಯಲಾಗಿದ್ದ ನಕಲಿ ತುಪ್ಪ ರಾಜ್ಯದ ಮೂಲೆ ಮೂಲೆಗೂ ಸರಬರಾಜು ಆಗಿರುವುದು ಕಂಡು ಬಂದಿದೆ. ಈ ಜಾಲವನ್ನು ಪೂರ್ಣ ಪತ್ತೆ ಹಚ್ಚುವುದು ಅಕ್ಷರಶಃ ಕೆಎಂಎಫ್ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

Edited By : Shivu K
Kshetra Samachara

Kshetra Samachara

22/12/2021 10:10 am

Cinque Terre

954

Cinque Terre

0

ಸಂಬಂಧಿತ ಸುದ್ದಿ