ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪಘಾತವಲ್ಲ, ಕೊಲೆ ಎಂದು ಸಾಬೀತು; ʼ100 ರೂ. ಜಗಳʼ ಪ್ರಾಣಕ್ಕೆ ಎರವಾಯಿತು!

ಯಲಹಂಕ: ತೂಕ ಹಾಕುವ ವಿಚಾರಕ್ಕೆ ಅ.17ರಂದು ಪ್ರತೀಕ್ ಮತ್ತು ಸಮೀಷ್ ಎಂಬವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಮೀಷ್ ತೂಕ ಹಾಕುವ ಕಲ್ಲಿನಿಂದಲೇ ಪ್ರತೀಕ್ ತಲೆಗೆ ಹೊಡೆದಿದ್ದ! ಬಳಿಕ ವಾಪಸ್ ಮನೆಗೆ ಬಂದ ಪ್ರತೀಕ್ ಗೆ ತೀವ್ರ ತಲೆನೋವು ಕಾಡಿತ್ತು. ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೆ‌ ಪ್ರತೀಕ್ ಯಾದವ್ ಮೃತಪಟ್ಟಿದ್ದ.

ಈ ಮುಂಚೆ ಮನೆಯವರು ಕೇಳಿದಾಗ ಪ್ರತೀಕ್ ಮತ್ತಿಕೆರೆ ಬಳಿ ಸೆಲ್ಫ್ ಆಕ್ಸಿಡೆಂಟ್ ಆಗಿದೆ ಎಂದು ಸುಳ್ಳು ಹೇಳಿದ್ದ. ಮನೆಯವರು ಮತ್ತು ಸ್ನೇಹಿತರ ಜೊತೆ ಗಲಾಟೆ ಆಗಿರುವುದನ್ನು ಮುಚ್ಚಿಟ್ಟಿದ್ದ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಚುರುಕುಗೊಳಿಸಿದರು. ಕೃತ್ಯ‌ ನಡೆದ ಸ್ಥಳ ಪರಿಶೀಲಿಸಿದಾಗ ಅಪಘಾತ ನಡೆದಿಲ್ಲ ಎಂಬುದು ಕನ್ಫರ್ಮ್ ಆಗಿತ್ತು.

CDR,CCTV & ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಬೇಧಿಸಿದ ಯಶವಂತಪುರ ಸಂಚಾರ ಪೊಲೀಸರು,ಇತ್ತ‌ ಮರಣೋತ್ತರ ಪರೀಕ್ಷೆಯಲ್ಲಿ ಭಾರದ ವಸ್ತುವಿನಿಂದ ಬಿದ್ದ ಬಲವಾದ ಹೊಡೆತದಿಂದ ಪ್ರತೀಕ್ ಮೃತಪಟ್ಟಿರುವುದು ದೃಢ ಪಟ್ಟಿತ್ತು. ಈ ಹಿನ್ನಲೆ‌ಯಲ್ಲಿ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಕುಲದೀಪ್ ಜೈನ್ ತನಿಖೆಗೆ ಆದೇಶಿಸಿದ್ದರು.

2 ದಿನಗಳ ಹಿಂದೆ ಪೊಲೀಸರ ಕೈ ಸೇರಿದ ಪೋಸ್ಟ್ ಮಾರ್ಟಂ ವರದಿಯಲ್ಲಿ ಕೊಲೆ ಎಂದು ಸಾಬೀತಾಗಿತ್ತು. ಕೊಲೆ ಪ್ರಕರಣವನ್ನು ಕೋಡಿಗೆಹಳ್ಳಿ ಪೊಲೀಸರಿಗೆ ಯಶವಂತಪುರ ಪೊಲೀಸರು ವರ್ಗಾಯಿಸಿದ್ದರು. ತನಿಖೆ ಕೈಗೊಂಡ ಕೋಡಿಗೆಹಳ್ಳಿ ಪೊಲೀಸರು ಆರೋಪಿ ಸಮೀಷ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

18/12/2021 07:40 am

Cinque Terre

614

Cinque Terre

0

ಸಂಬಂಧಿತ ಸುದ್ದಿ