ಬೆಂಗಳೂರು:ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಿದರಕಲ್ಲು ನಡೆದಿದೆ.
ಸಾಕಮ್ಮ (ಸಾಕ್ಷಿ) ಎಂಬ 24 ರ ಯುವತಿನೇ ದೊಡ್ಡಬಿದರಕಲ್ಲು ಮನೆಯ ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಾಗಲ್ ಪ್ರೇಮಿ ಅರುಣ್ ಪ್ರೀತಿಸು ಮದುವೆ ಆಗು ಅಂತಲೇ ಪೀಡಿಸುತ್ತಿದ್ದ. ಅಷ್ಟೇ ಅಲ್ಲ. ಈತನ ಸ್ನೇಹಿತ ಗೋಪಾಲ್ ತಾನು ಬಸವೇಶ್ವರ ಪೊಲೀಸ್ ಎಂದು ಸಾಕ್ಷಿ ಮಾವನಿಗೆ ಪೋನ್ ಮಾಡಿದ್ದಾನೆ. ಸಾಕ್ಷಿ ಹೆಸರು ಹೇಳಿ ಅರುಣ್ ಆತ್ಮಹತ್ಯೆಗೂ ಯತ್ನಿಸಿದ್ದಾನೆ ಎಂದು ಹೇಳಿದ್ದಾನೆ.
ಈ ಬೆದರಿಕೆಗೆ ಅಂಜಿ ಸಾಕಮ್ಮ ಮನೆಯ ಕೋಣೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಚ್ಚು ಪ್ರೇಮಿ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್ ರನ್ನ ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಆಗಿದೆ.
Kshetra Samachara
16/12/2021 06:07 pm