ಬೆಂಗಳೂರು: ಕಳೆದ ಶನಿವಾರ ಬೆಂಗಳೂರು ಹೊರವಲಯ ಆನೇಕಲ್ ನ ಚಂದಾಪುರದಲ್ಲಿ ನಡೆದಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಆತನ ಪ್ರೇಯಸಿ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ಸಮೀಪದ ಚಿಕ್ಕಹಾಗಡೆ ವಾಸಿ ಮೃತ ಕಾವ್ಯಳ ಪತಿ ಮುತ್ತುರಾಜ ಬಂಧಿತ ಆರೋಪಿ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ @ ದಾಸ ಮತ್ತು ಪತ್ನಿ ಕಾವ್ಯಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಚಂದಾಪುರದ ರಾಮಯ್ಯ ಬಡಾವಣೆಯ ಪತ್ನಿ ಕಾವ್ಯ ತಾಯಿ ಮನೆಯಲ್ಲಿ ಜೋಡಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಚಾಕುವಿನಿಂದ ಇಬ್ಬರಿಗೂ ಇರಿದಿದ್ದ. ಸದ್ಯ ಆರೋಪಿಯನ್ನು ಬಂಧಿಸಿದ್ದು, ಇಂದು ಆನೇಕಲ್ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಹಾಜರು ಪಡಿಸಲಾಗಿದೆ. ಪ್ರಕರಣದಲ್ಲಿ ಬೇರೆಯವರ ಕೈವಾಡ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸಲು 2 ತಂಡ ರಚಿಸಲಾಗಿದೆ.
ಮೃತ ನಾರಾಯಣಸ್ವಾಮಿ ಗ್ರಾಪಂ ಸದಸ್ಯನಾಗಿದ್ದು, ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸಹ ಆಗಿದ್ದ ಎಂಬ ಮಾಹಿತಿಯಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ. ಕೆ. ವಂಶಿಕೃಷ್ಣ ತಿಳಿಸಿದ್ದಾರೆ.
Kshetra Samachara
14/12/2021 10:53 pm