ಬೆಂಗಳೂರು: ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಕಮ್ಮನಹಳ್ಳಿಯ ಕುಳ್ಳಪ್ಪ ಸರ್ಕಲ್‌ನಲ್ಲಿ ಆಫ್ರಿಕಾದ ಪ್ರಜೆಗಳ ನಡುವಿನ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಮೊದಲು ಮಾತಿನ ಚಕಮಕಿಯಲ್ಲಿ ನಡೆದ ಕಿತ್ತಾಟ ವಿಕೋಪಕ್ಕೆ ತಿರುಗಿ ಜತೆಗಿದ್ದ ಇನ್ನೊಬ್ಬ ವ್ಯಕ್ತಿ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗ್ತಿದೆ.ವಿಕ್ಟರ್ ಎಂಬ 35ವರ್ಷದ ವ್ಯಕ್ತಿ ಕೊಲೆಯಾದವನು. ಇಬ್ಬರು ವ್ಯಕ್ತಿಗಳು ಮಾತನಾಡಿಕೊಂಡು ಬರುವಾಗ ಕ್ಷುಲ್ಲಕ ವಿಷಯದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..ಕೃತ್ಯದ ಅಸಲೀಯತ್ತು ಏನು ಎನ್ನುವುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮಾಡಬೇಕಿದೆ..
ನಗರದಲ್ಲಿ ಆಫ್ರಿಕಾ ಮೂಲದ ಪ್ರಜೆಗಳ ಪುಂಡಾಟಿಕೆಗೆ ನಿಜವಾಗಲು ಬ್ರೇಕ್ ಹಾಕ್ತಾರಾ ಕಮಿಷನರ್ ಕಮಲ್ ಪಂಥ್ ? ಎಂಬ ಪ್ರಶ್ನೆ ಎದ್ದಿದೆ.
Kshetra Samachara
13/12/2021 07:25 am