ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ದರೋಡೆ- ಖತರ್ನಾಕ್ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಆಟೋ ಹತ್ತಿ ಆಟೋ ಡ್ರೈವರ್ ನನ್ನು ಸುಲಿಗೆ ಮಾಡಿದ್ದ ಆರೋಪಿಗಳನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ನಾಗೇಂದ್ರ, ದೊಡ್ಡವೀರೆಗೌಡ, ದರ್ಶನ್, ಶಿವಕುಮಾರ್ ಬಂಧಿತ ಆರೋಪಿಗಳು. ಕಳೆದ ತಿಂಗಳು (ನವೆಂಬರ್‌) 17ರಂದು ಕೆಂಗೇರಿ ಬಳಿ ಆಟೋ ಹತ್ತಿದ್ದ ನಾಲ್ವರು ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಆಟೋ ಚಾಲಕನ ಬಳಿಯಿದ್ದ 2 ಮೊಬೈಲ್ ಕಸಿದುಕೊಂಡಿದ್ದರು. ಆದರೆ ಮಾರ್ಗಮಧ್ಯೆ ಪೊಲೀಸರನ್ನು ಕಂಡು ಚಾಲಕನನ್ನ ಕೆಳಗೆ ತಳ್ಳಿ ಆಟೋ ಸಮೇತ ಆರೋಪಿಗಳು ಪರಾರಿಯಾಗಿದ್ದರು.

ಬಂಧಿತರಿಂದ 3 ಲಕ್ಷ ರೂ. ಮೌಲ್ಯದ 1 ಆಟೋ ರಿಕ್ಷಾ, 2 ಮೊಬೈಲ್, 46 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಖತರ್ನಾಕ್ ಆರೋಪಿಗಳನ್ನು ಪೊಲೀಸರು ವಿಚಾರಸಿದಾಗ ಕನಕಪುರ ಕೆಂಗೇರಿ ಬ್ಯಾಟರಾಯನಪುರ ವ್ಯಾಪ್ತಿಯ 3 ಕಳವು ಪ್ರಕರಣ ಬೆಳಕಿಗೆ ಬಂದಿವೆ.

Edited By : Vijay Kumar
Kshetra Samachara

Kshetra Samachara

12/12/2021 12:51 pm

Cinque Terre

238

Cinque Terre

0

ಸಂಬಂಧಿತ ಸುದ್ದಿ