ಬೆಂಗಳೂರು: ಖ್ಯಾತ ನಿರ್ಮಾಪಕನ ಬಾಮೈದನ ವಾಸು ಅಲಿಯಾಸ್ ಗುಟ್ಟಹಳ್ಳಿ ವಾಸು ಎಂಬಾತ ತಮ್ಮ ತಂಡದ ಜತೆ ಸೇರಿಕೊಂಡು ಯತೀಶ್ ಎಂಬ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಈ ನೈತಿಕ ಪೊಲೀಸ್ ಗಿರಿ ಮಾಡಿದ ತಂಡ ಯುವಕನನ್ನು ಅರೆಬೆತ್ತಲೆಗೊಳಿಸಿ ಹಾಕಿ ಸ್ಟಿಕ್ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಯುವಕ ಪರಿಪರಿಯಾಗಿ ಹೊಡಿಬೇಡಿ ಸಾರ್ ಅಂತಾ ಬೇಡಿ ಕೊಂಡ್ರು ಬಿಡದೆ ಬಡೆದಿದ್ದಾರೆ.
ನ. 15 ರಂದು ಯುವಕನ ಕೆಲಸದ ಸ್ಥಳಕ್ಕೆ ಹೋಗಿ ಯತೀಶನ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲಲ್ಲಿ ಒದ್ದು ಚಿತ್ರಹಿಂಸೆ ನೀಡಿದ್ದಾರೆ. ಸದ್ಯ ಬಡ್ಡಿ ಹಣದ ವಿಚಾರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಇದೀಗ ವಾಸು ಅಂಡ್ ಟೀಂ ವಿರುದ್ಧ ಕೆಜಿ ನಗರ ಪೊಲೀಸ್ ಠಾಣೆಯಲ್ಲಿ ಯತೀಶ್ ತಂದೆ ನನ್ನ ಮಗ ಕಾಣಿಸ್ತಿಲ್ಲ ಅಂತಾ ದೂರು ನೀಡಿದ್ದಾರೆ.
ನಿರ್ಮಾಪಕ ಉಮಾಪತಿ ಮತ್ತು ಸಹೋದರನ ಹತ್ಯೆ ಸ್ಕೆಚ್ ನಲ್ಲೂ ವಾಸು ಭಾಗಿ..? ಹೋಟೆಲ್ ಕ್ಯಾಶಿಯರ್ ಉದಯ್ ಕುಮಾರ್ ಗೆ ಸುಪಾರಿ ಅಡ್ವಾನ್ಸ್ ಕೊಟ್ಟಿರೊ ವಾಸು ಬಗ್ಗೆ ಉದಯ್ ಕುಮಾರ್ ಸ್ವ ಇಚ್ಚಾ ಹೇಳಿಕೆಯಲ್ಲಿ ವಾಸು ಹೆಸ್ರು ಉಲ್ಲೇಖ ಮಾಡಿದ್ದಾರೆ.
ಬಂಧನದ ಭೀತಿಯಲ್ಲಿರುವ ವಾಸು ತಲೆ ಮರೆಸಿಕೊಂಡಿದ್ದಾನೆ.
Kshetra Samachara
11/12/2021 01:10 pm