ಬೆಂಗಳೂರು: ಮಹದೇವಪುರ ಕ್ಷೇತ್ರದ ಮಂಡೂರ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 31 ರಲ್ಲಿ 7 ಎಕರೆ 31 ಕುಂಟೆ ಜಮೀನಿನಲ್ಲಿ 5 ಎಕರೆಗೂ ಹೆಚ್ಚು ಭೂ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು ಪೂರ್ವ ತಹಸೀಲ್ದಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಒತ್ತುವರಿ ಕುರಿತ ಮಾಹಿತಿ, ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅದೇ ರೀತಿ ಸರ್ವೆ ನಂಬರ್ 8 ರಲ್ಲಿನ ಗುಂಡುತೋಪು ಜಮೀನು ಒತ್ತುವರಿಯಾಗಿದ್ದು, ಅದೇ ಗ್ರಾಮದ ಬೋವಿ ಕಾಲೊನಿಯಲ್ಲಿನ ರಸ್ತೆಯಲ್ಲಿ ಚರಂಡಿ ನಿರ್ಮಿಸದ ಕಾರಣ ರಸ್ತೆಯಲ್ಲೇ ಕೊಳಚೆ ನೀರು ನಿಂತು, ಆ ನೀರಲ್ಲೇ ಬೋವಿ ಕಾಲೊನಿ ಜನರು ಸಂಚರಿಸುವಂತಾಗಿದೆ.
ಇದರಿಂದಾಗಿ ದುರ್ವಾಸನೆ, ಸೊಳ್ಳೆ ಕಾಟ, ಸಾಂಕ್ರಾಮಿಕ ರೋಗ ಭೀತಿಯಲ್ಲಿಯೇ ಈ ಜನ ಬದುಕು ಸಾಗಿಸುವಂತಾಗಿದೆ. ಎರಡು ತಿಂಗಳ ಹಿಂದೆ ಚರಂಡಿ ನಿರ್ಮಿಸುವಂತೆ ಶಾಸಕ ಅರವಿಂದ ಲಿಂಬಾವಳಿ, ಅಧಿಕಾರಿಗಳಿಗೆ ಸೂಚಿಸಿದರೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
09/12/2021 10:55 pm