ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ವಿದ್ಯಾರ್ಥಿಗಳ ಬೈಕ್ ಗಳೇ ಟಾರ್ಗೆಟ್; ಮೂವರು ಖದೀಮರು ಅಂದರ್

ದೇವನಹಳ್ಳಿ: ಕಾಲೇಜ್ ಗಳನ್ನು ಟಾರ್ಗೆಟ್ ಮಾಡ್ಕೊಂಡ್ ಬೈಕ್ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಸುತ್ತಮುತ್ತಲಿನ ಪ್ರತಿಷ್ಠಿತ ಕಾಲೇಜ್ ಗಳನ್ನು ಟಾರ್ಗೆಟ್ ಮಾಡಿ, ಪಾರ್ಕಿಂಗ್ ಸ್ಥಳದಿಂದ ಬೈಕ್ ಗಳನ್ನು ಕದ್ದು ಮಾರುತ್ತಿದ್ದ ಬೈಕ್ ಕಳ್ಳರ ಗ್ಯಾಂಗ್ ಪೊಲೀಸರ ತಲೆ ಬಿಸಿ ಮಾಡಿತ್ತು. ಅದರಲ್ಲೂ ಡಿಯೋ ಬೈಕ್ ಗಳನ್ನು ಕದಿಯೋದ್ರಲ್ಲಿ ಪರಿಣತರಾಗಿದ್ದರು.

ಬೈಕ್ ಕಳ್ಳರ ಗ್ಯಾಂಗ್ ಬೆನ್ನತ್ತಿ ಕಾರ್ಯಾಚರಣೆ ನಡೆದಿದ್ದು, ವಿಜಯಪುರ ಆರಕ್ಷಕ ಉಪ ನಿರೀಕ್ಷಕ ನಂದೀಶ್ ನೇತೃತ್ವ ವಹಿಸಿದ್ದರು. ಮೂವರು ಬೈಕ್ ಕಳ್ಳರಿಂದ 28 ಬೈಕ್ ಗಳು, 3 ಕಾರುಗಳು ಮತ್ತು ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ.

ವಿಜಯಪುರ ಮೂಲದ ಸಾದಿಕ್(25), ಬೆಂಗಳೂರು ಮೂಲದ ಮೊಹಮ್ಮದ್ ಸೂಫಿಯಾನ್(30), ಸಾಹಿಲ್ (24) ಬಂಧಿತರು.

Edited By : Manjunath H D
Kshetra Samachara

Kshetra Samachara

08/12/2021 07:30 pm

Cinque Terre

460

Cinque Terre

0

ಸಂಬಂಧಿತ ಸುದ್ದಿ