ಬೆಂಗಳೂರು: ಆರು ತಿಂಗಳ ಹಿಂದೆ ನಡೆದಿದ್ದ ಕಿರಿಕ್ ನ ದ್ವೇಷಕ್ಕೆ , ಶಿವಾಜಿ ನಗರ ರೌಡಿ ಶೀಟರ್ ಮನ್ಸೂರ್ ಅಲಿಯಾಸ್ ದೂನ್ ಎಂಬಾತನಿಗೆ ಸಿನಿಮೀಯ ಸ್ಟೈಲ್ ನಲ್ಲಿ ಅಟ್ಯಾಕ್ ಮಾಡಿ ಹೆಂಡತಿ ಎದುರಲ್ಲೆ ಚಾಕು ಇರಿದಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಸೈಯದ್ ಮೋಯಿನುದ್ದಿನ್, ಅರ್ಬಾಜ್, ಅದ್ನಾನ್ , ಅರ್ಫಾತ್ ಹಾಗು ಓರ್ವ ಬಾಲಕನನ್ನು ಅರೆಸ್ಟ್ ಮಾಡಲಾಗಿದೆ.ಈ ಹಿಂದೆ ರಂಜಾನ್ ದಿನದಲ್ಲಿ ಶಿವಾಜಿನಗರದಲ್ಲಿ ಬೈಕ್ ನಲ್ಲಿ ರೌಂಡ್ಸ್ ಹೊಡೆಯುತ್ತಿದ್ದ ಆರೋಪಿಗಳು ಮನ್ಸೂರ್ ಅಲಿಯಾಸ್ ಗೆ ಚಮಕ್ ಕೊಟ್ಟಿದ್ದರು. ಈ ವೇಳೆ ರಸ್ತೆಯಲ್ಲಿ ಅಡ್ಡಗಟ್ಟಿ ಮೋಯಿನುದ್ದಿನ್ ಸೇರಿ ಮೂವರಿಗೆ ದೂನ್ ಹೊಡೆದಿದ್ದರು. ರಸ್ತೆಯಲ್ಲಿ ಹೊಡೆದಿದ್ದಕ್ಕೆ ಆರೋಪಿಗಳು ಸೇಡು ಇಟ್ಟುಕೊಂಡು ವಾಪಸ್ ಅಟ್ಯಾಕ್ ಮಾಡಿದ್ದಾರೆ.
ಬೈಕ್ ಸರ್ವಿಸ್ ಗೆ ಬಿಡಲು ಗ್ಯಾರೇಜ್ ಗೆ ಬಂದಾಗ ಅದೇ ಗ್ಯಾರೇಜ್ ನಲ್ಲೇ ಕೆಲಸ ಮಾಡುತ್ತಿದ್ದ ಆರೋಪಿ ಮೊಯಿನುದ್ದಿನ್ ,ಮನ್ಸೂರ್ ನನ್ನು ನೋಡಿದ್ದ.ನಂತ್ರ ಬೈಕ್ ಸರ್ವಿಸ್ ಮಾಡಿಸಿಕೊಂಡು ಹೋಗಬೇಕಾದ್ರೆ ಅಟ್ಯಾಕ್ ಮಾಡಿದ್ದಾರೆ.ಮೊದಲು ಬೈಕ್ ನಿಂದ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ಅಟ್ಯಾಕ್ ಮಾಡಿ ಎಸ್ಕೇಪ್ ಆಗಿದ್ದಾರೆ. ಸದ್ಯ ಆರೋಪಿಗಳನ್ನು ಪುಲಕೇಶ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Kshetra Samachara
06/12/2021 03:35 pm