ಬೆಂಗಳೂರು: ಕೆಲ ದಿನಗಳ ಹಿಂದೆ ವಸಂತನಗರದಲ್ಲಿ ಹಾಡಹಗಲೇ ಲಾಂಗ್ ಬೀಸಿ ದರೋಡೆ ಮಾಡಿದ್ದ ಅಸಾಮಿಯನ್ನ ಅರೆಸ್ಟ್ ಮಾಡುವಲ್ಲಿ ಹೈ ಗ್ರೌಂಡ್ಸ್ ಪೊಲೀಸರು ಯಶಸ್ವಿಯಾಗಿದ್ದಾರೆ ಬರ್ನಲ್ ಸಿದ್ದಿಕಿ ಬಂಧಿತ ಆರೋಪಿಯಾಗಿದ್ದು ಈತ ಕೆ.ಜಿ ಹಳ್ಳಿ ನಿವಾಸಿಯಾಗಿದ್ದಾನೆ ಕಳೆದ ಭಾನುವಾರ ಸಂಜೆ ವಸಂತನಗರದ 8ನೇ ಕ್ರಾಸ್ ಗೆ ಬಂದಿದ್ದ ಬರ್ನಲ್ ಸಿದ್ದಿಕಿ ಬೇಕರಿ ಯೊಂದಕ್ಕೆ ನುಗ್ಗಿ ಲಾಂಗ್ ತೋರಿಸಿ ದರೋಡೆ ಮಾಡಿ ಸಿದ್ದಿಕಿ ಎಸ್ಕೇಪ್ ಆಗಿದ್ದ.
ಇನ್ನು ಬಂಧನ ಮಾಡಿದ ವೇಳೆ ಠಾಣೆಯಲ್ಲಿ ಸಿದ್ದಿಕಿ ಡ್ರಾಮಾ ಮಾಡಿದ್ದು ಬ್ಲೇಡ್ ನುಂಗಿದ್ದೇನೆ ಎಂದು ಪೊಲೀಸರನ್ನ ಹೆದರಿಸಿದ್ದ ನಂತರ ಅಸ್ಪತ್ರೆಗೆ ಕರೆತಂದು ಸ್ಕ್ಯಾನಿಂಗ್ ಮಾಡಿಸಿದ ಮೇಲೆ ಸತ್ಯ ಗೊತ್ತಾಗಿದ್ದು ಈ ಹಿಂದೆ ಕೂಡ ಈತ ಪೊಲೀಸರನ್ನು ಹೆದರಿಸಲು ಈ ರೀತಿ ನಾಟಕ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
Kshetra Samachara
01/12/2021 11:34 am