ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುಖ್ಯಾತ ಮನೆಗಳ್ಳನ ಬಂಧನ

ಬೆಂಗಳೂರು: ಮನೆ ಬಾಗಿಲು ಮುರಿದು ಕಳ್ಳತನ ಮಾಡ್ತಿದ್ದ ನಟೋರಿಯಸ್ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುರೇಶ್ ಬಂಧಿತ ಆರೋಪಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನ ಗಮನಿಸಿ ರಾತ್ರಿ ಕಳ್ಳತನ ಮಾಡ್ತಿದ್ದ ಈತ,ನಂತರ

ರಾಡ್ ನಿಂದ ಬಾಗಿಲು ಮೀಟಿ ಕದಿಯುತ್ತಿದ್ದ.

ಅಂಗಳದ ಮುಂದೆ ಕಸ ಗುಡಿಸದೇ ಇರುವ ಮನೆಗಳು ,‌ನ್ಯೂಸ್ ಪೇಪರ್ ಗಳು ಬಿದ್ದಿರುವ ಮನೆಗಳನ್ನೇ ಟಾರ್ಗೆಟ್ ಮಾಡ್ತಿದ್ದ ಇವನಿಂದ 28‌ಲಕ್ಷ ಮೌಲ್ಯದ 534 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾದ್ದು, ಒಟ್ಟು 8 ಪ್ರಕರಣ ಬೆಳಕಿಗೆ ಬಂದಿವೆ.

ಮಾಗಡಿ ,ರಾಜಗೋಪಾಲನಗರ, ಬ್ಯಾಡರಹಳ್ಳಿ ಸೇರಿ ಹಲವೆಡೆ ಮನೆಗಳ್ಳತನ ಮಾಡ್ತಿದ್ದ ಆರೋಪ ಈತನ ಮೇಲೆ ಇದೆ .ಸದ್ಯ ಬ್ಯಾಡರಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ ಈ ಖದೀಮ.

Edited By : Nirmala Aralikatti
Kshetra Samachara

Kshetra Samachara

26/11/2021 12:51 pm

Cinque Terre

174

Cinque Terre

0

ಸಂಬಂಧಿತ ಸುದ್ದಿ