ಬೆಂಗಳೂರು: ಮನೆ ಮನೆ ಸುತ್ತಿ ಹಗಲು ವೇಳೆಯಲ್ಲೇ ಮನೆಗಳ ಬೀಗ ಮುರಿದು ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ
ಜ್ಙಾನಭಾರತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೈಯದ್ ಅಹಮದ್ (38) ಬಂಧಿತ ಆರೋಪಿ.ಮೊದಲು ಬೀಗ ಹಾಕಿದ ಮನೆಗಳನ್ನು ಗುರುತಿಸ್ತಿದ್ದ ಈ ಅಸಾಮಿ ನಂತರ ಮನೆ ಬಳಿ ಬಂದು ಹತ್ತಾರು ಬಾರಿ ಕಾಲಿಂಗ್ ಬೆಲ್ ಮಾಡ್ತಿದ್ದ
ಬಾಗಿಲು ಓಪನ್ ಮಾಡಿದ್ರೆ ಅಡ್ರೆಸ್ ಕೇಳಿ ವಾಪಸ್ ಬರ್ತಿದ್ದ.
ಬಾಗಿಲು ತೆಗೆಯದಿದ್ರೆ ಬಾಗಿಲು ಒಡೆದು ಒಳಹೋಗ್ತಿದ್ದ ನಂತರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗ್ತಿದ್ದ ಈ ಕಿರಾತಕ.
ಬಂಧಿತನಿಂದ 20 ಲಕ್ಷ ಮೌಲ್ಯದ 407 ಗ್ರಾಂ ಚಿನ್ನಾಭರಣ,2500 ಗ್ರಾಂ ಬೆಳ್ಳಿಯ ವಸ್ತುಗಳು ವಶಪಡಿಸಿಕೊಂಡಿದ್ದು ಆರೋಪಿ ಬಂಧನದಿಂದ ಒಟ್ಟು 7 ಪ್ರಕರಣಗಳು ಬೆಳಕಿಗೆ ಬಂದಿದೆ.
Kshetra Samachara
23/11/2021 12:53 pm