ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ನಾಣ್ಣುಡಿ ಎಲ್ಲರಿಗೂ ಪರಿಚಿತ. ರಕ್ಷಕರೇ ಭಕ್ಷಕರಾದ ಸಂದರ್ಭಗಳಲ್ಲಿ ಈ ಮಾತು ಹೇಳುವುದು ರೂಢಿ. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ವಿಡಿಯೋ..
ಹೌದ್ರಪ್ಪ. ಹೌದು... ಬೆಳಿಗ್ಗೆ ಬೆಳಿಗ್ಗೆ ಮನೆ ಬಾಗಿಲಿಗೆ ಒಂದೆರಡು ರೂಪಾಯಿ ಕೇಳೋ ಭಿಕ್ಷುಕರು ಬಂದರೆ ಕಿರಿಕಿರಿ ಆಗತ್ತೆ. ಅಂತಾದ್ರಲ್ಲಿ ಈ ಹಫ್ತಾ ವಸೂಲಿ ಮಾಡೋ ಮಂದಿ ಬಂದರೆ ಆ ಡೇ ಬ್ಯಾಡ್ ಡೇ ಆಗೋದು ಫಿಕ್ಸ್. ಆದರೆ ಹೀಗೆ ವಸೂಲಿಗೆ ಬಂದ ಹೊಯ್ಸಳ ಸಿಬ್ಬಂದಿ ತಮ್ಮ ಬ್ಯಾಡ್ ಡೇ ಎಂಟ್ರಿ ಕೊಟ್ಟಿದ್ದಾರೆ.
ಇದು ನಡೆದಿದ್ದು ರಾಜ್ಯದ ರಾಜಧಾನಿ ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್ ಸಮೀಪ ಅಂಗಡಿಯೊಂದರ ಮುಂದೆ. ಅಂಗಡಿ ಮಾಲೀಕರೊಬ್ಬರಿಂದ ಪೊಲೀಸರು ಹಣ ವಸೂಲಿ ಮಾಡಿ ಇನ್ನೇನು ಹೊರಟಿದ್ದರು... ಆಗ ಎಂಟ್ರಿ ಕೊಟ್ಟವನೇ ಹೀರೋ... ಸರ್... ಸರ್. ಒಂದು ನಿಮಿಷ ನಿಲ್ಲರೀ ಎಂದವನೇ ಕೊಟ್ಟ ನೋಡಿ ಶಾಕ್...
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಲಂಚ, ಹಫ್ತಾ ಕೇಳುವ ಮಂದಿಗೆ ಹೀಗೆ ಬಿಸಿ ಮುಟ್ಟಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.
Kshetra Samachara
18/11/2021 04:46 pm