ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಟೋರಿಯಸ್ ರೌಡಿ ಕರ್ಚಿಪ್ ಪಳನಿ ಕಾಲಿಗೆ ಗುಂಡಿಕ್ಕಿದ ಸಿಸಿಬಿ ಪೊಲೀಸರು

ಬೆಂಗಳೂರು: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿಶೀಟರ್ ಪಳನಿ ಅಲಿಯಾಸ್ ಕರ್ಚಿಪ್ ಪಳನಿ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹೊಡೆದು ತಮ್ಮ‌ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಸುಬ್ರಮಣ್ಯಪುರ, ಕೋಣನಕುಂಟೆ ಹಾಗೂ ಅಶೋಕನಗರ ಪೊಲೀಸ್ ಠಾಣೆಗಳ ರೌಡಿಶೀಟರ್ ಪಳನಿ, ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ರೌಡಿ ನಿಗ್ರಹದಳದ ಎಸಿಪಿ ಎಚ್.ಎಸ್‌.ಪರಮೇಶ್ವರ್ ಹಾಗೂ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದೆ. ರೌಡಿಶೀಟರ್ ಬಂಧನ ವೇಳೆ ಆರೋಪಿಯು ಡ್ರ್ಯಾಗರ್‌ನಿಂದ ಇನ್‌ಸ್ಪೆಕ್ಟರ್ ಹರೀಶ್ ಎಡಗೈ ಚುಚ್ಚಿ ರಕ್ತಗಾಯಪಡಿಸಿದ್ದ. ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಗುಂಡು ಹೊಡೆದರೂ ಎಸಿಪಿ ಮೇಲೆಯೆ ಹಲ್ಲೆಗೆ‌ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಸರ್ವೀಸ್ ಪಿಸ್ತೂಲ್‌ನಿಂದ ಆರೋಪಿ ಕಾಲಿಗೆ ಗುಂಡು ಹೊಡೆದು ತಮ್ಮ‌ ಸುಪರ್ದಿಗೆ ಪಡೆದುಕೊಂಡು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆ ಸೇರಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಇತ್ತೀಚೆಗೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮುನ್ನಕುಮಾರ್ ಎಂಬುವನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ದಾರಿ ಬಿಡುವ ವಿಚಾರಕ್ಕಾಗಿ ಮುನ್ನ ಕಿರಿಕ್‌ ಮಾಡಿಕೊಂಡಿದ್ದ. ಇದರಿಂದ ಅಸಮಾಧಾನಗೊಂಡ ಪಳನಿ ಹಾಗೂ ಆತನ ಗ್ಯಾಂಗ್ ಚಾಕವಿನಿಂದ ಕುತ್ತಿಗೆ ಸೀಳಿ ಕೊಲೆಗೆ ಕಾರಣನಾಗಿದ್ದ. ಮೃತನ ಪತ್ನಿ ಕೆಂಪಮ್ಮ ಎಂಬುವರು ದೂರು‌ ನೀಡಿದ ಮೇರೆಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Edited By : Shivu K
Kshetra Samachara

Kshetra Samachara

17/11/2021 09:46 am

Cinque Terre

466

Cinque Terre

0

ಸಂಬಂಧಿತ ಸುದ್ದಿ