ಬೆಂಗಳೂರು: ಸಿಟಿ ಮಾರ್ಕೆಟ್ ಖಾಸಗಿ ಬಸ್ ನಿಲ್ಧಾಣದ ನ್ಯಾಷನಲ್ ಟ್ರಾವೆಲ್ಸ್ ಡಿಪೋ ಹತ್ತಿರ ಸಂರಕ್ಷಿತ ನಕ್ಷತ್ರ ಆಮೆಗಳ ಮಾರಾಟ ಮಾಡಲು ಯತ್ನಿಸುತ್ತಿದ್ದ ಮುತ್ತು ಅಹ್ಮದ್ ಮೀರಾ ಎನ್ನುವ ಆರೋಪಿಯನ್ನ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದು,ಆರೋಪಿ ಕಡೆಯಿಂದ 401 ನಕ್ಷತ್ರ ಅಮೆಗಳನ್ನ ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ಜೀವಿಗಳನ್ನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನೆ ಮಾಡಲಾಗಿದ್ದು ತನಿಖೆ ಮುಂದುವರೆಸಲಾಗಿದೆ
Kshetra Samachara
16/11/2021 03:19 pm