ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಸಂಘಟನೆಯ ಉಪಾಧ್ಯಕ್ಷನಾಗಿದ್ದ ಶ್ರೀಧರ್ ಎನ್ನುವನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಪೊಲೀಸ್ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಮುಖ ಆರೋಪಿ ರಘು ಎನ್ನುವ ಆರೋಪಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಬಳಸಿದ್ದ ಮಾರಕಾಸ್ತ್ರ ವಶಪಡಿಸಿಕೊಳ್ಳುವ ಸಮಯದಲ್ಲಿ ರಾಮೂರ್ತಿನಗರ ಮತ್ತು ಹೆಣ್ಣೂರು ನಡುವೆ ಇರುವ ರೈಲ್ವೆ ಬ್ರಿಡ್ಜ್ ಬಳಿ ಕರೆದೊಯ್ದ ಸಬ್ ಇನ್ಸ್ಪೆಕ್ಟರ್ ಲಿಂಗರಾಜ ಮೇಲೆ ಆರೋಪಿ ರಘು ಹಲ್ಲೆಗೆ ಯತ್ನಿಸಿದ್ದ ಕೂಡಲೇ ಕಾರ್ಯಪ್ರವರ್ತರಾದ
ಹೆಣ್ಣೂರು ಠಾಣೆ ಇನ್ಸ್ ಪೆಕ್ಟರ್ ವಸಂತ್ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದು ಇತರೆ 5 ಆರೋಪಿಗಳನ್ನ ಕೂಡ ಬಂಧಿಸಿದ್ದಾರೆ.
ಇನ್ನು ಶ್ರೀಧರ ಕೊಲೆಗೆ ಹಳೆಯ ದ್ವೇಷ ಕಾರಣ ಎನ್ನಲಾಗುತ್ತಿದ್ದು,ಶ್ರೀಧರ್ ಕೊಲೆ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ರಘು,ಮಹೇಶ್, ಹರೀಶ್, ಸುಜೀತ್ ನಾಯರ್, ಪ್ರಭು, ನೆಲ್ಸನ್ ನ ಬಂಧಿತ ಪ್ರಮುಖ ಆರೋಪಿಗಳು
Kshetra Samachara
16/11/2021 12:44 pm