ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಿ ವಿರುದ್ಧವೇ ಅತ್ಯಾಚಾರ ದೂರು ದಾಖಲಿಸಿದ ಬಿಗ್ ಬಾಸ್ ಖ್ಯಾತಿ ನಟಿ

ವರದಿ- ಮಲ್ಲಿಕ್ ಜಾನ್ ನದಾಫ್

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಕಿರುತೆರೆ ನಟಿಯಿಂದ ಈಗ ಪತಿ ನಾಗಾರ್ಜುನ ಮೇಲೆನೆ ಅತ್ಯಾಚಾರ ದೂರು ದಾಖಲಾಗಿದೆ.

ಕೆಲವು ದಿನಗಳ ಹಿಂದೆ ವಿವಾದಾತ್ಮಕವಾಗಿಯೆ ಮದುವೆ ಆಗಿದ್ದ ಈ ನಟಿ ಪತಿ ವಿರುದ್ಧವೇ 9 ಪುಟಗಳ ಸುದೀರ್ಘ ದೂರು ದಾಖಲಿಸಿದ್ದಾರೆ.

ಪತಿ ನಾಗಾರ್ಜುನ್ ವಿರುದ್ಧ ದಾಖಲಿಸಿದ ದೂರಿನಲ್ಲಿ ಅತ್ಯಾಚಾರ,ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.ಮದುವೆ ಬಳಿಕ ವರದಕ್ಷಿಣೆ ತರುವಂತೇನೂ ಒತ್ತಾಯಿಸಿದ್ದಾನೆ ಎಂದೂ ಬಿಗ್ ಬಾಸ್ ಖ್ಯಾತಿಯ ನಟಿ ಉಲ್ಲೇಖಿಸಿದ್ದಾರೆ.

ಸದ್ಯ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Edited By :
Kshetra Samachara

Kshetra Samachara

10/11/2021 06:51 pm

Cinque Terre

204

Cinque Terre

0