ಬೆಂಗಳೂರು : ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೀಗ ಹಾಕೋ ಮನೆಗಳನ್ನು ಗುರುತಿಸುತ್ತಾರೆ. ಇನ್ನು ಮನೆ ಬೀಗ ಹಾಕಿ ಮನೆ ಕೀ ಅಲ್ಲೇಲ್ಲೋ ಬಚ್ಚಿಟ್ರೆ ಮುಗೀತು. ಕೀ ತಗೋತಾರೆ ಮನೆಯನ್ನೇಲ್ಲಾ ದೋಚಿ ಎಸ್ಕೇಪ್ ಆಗತ್ತಾರೆ. ಹೌದು ಮನೆ ಕೇಳುವ ನೆಪದಲ್ಲಿ ಅಮಾಯಕರಂತೆ ಸಿಟಿಯಲ್ಲಿ ಅಡ್ಡಾಡುವ ಕಳ್ಳತನದಲ್ಲಿ ನಿಸ್ಸೀಮರಾದ ಜೋಡಿವೊಂದು ನಗರದ ಮಂಜುನಾಥ ಲೇಔಟ್ ನಿವಾಸಿ ವಿಜಯಲಕ್ಷ್ಮಿಯವರ ನಿವಾಸದಲ್ಲಿ ಕಳ್ಳತನ ಮಾಡಿದ್ದಾರೆ.
ಸದ್ಯ ವಿಜಯಲಕ್ಷ್ಮಿ ಕೊಟ್ಟ ದೂರಿನ ಮೇಲೆ ತನಿಖೆಗೆ ಇಳಿದ ಆರ್ ಟಿ ನಗರ ಪೊಲೀಸರು ಫಿಂಗರ್ ಪ್ರಿಂಟ್ ಮಾಹಿತಿ ಕಲೆ ಹಾಕುವ ಮೂಲಕ ಐನಾತಿ ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಮಲ್ಲೇಶ್ವರಂ ಕೇಸ್ ನಲ್ಲಿ ಸಿಕ್ಕಿದ್ದ ಇಬ್ಬರು ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್ ಆದ ಬಳಿಕ ಆರೋಪಿ ಜಯಂತಿ, ಬಾಬು ಅಲಿಯಾಸ್ ಮಾರ್ಕೆಟ್ ಬಾಬು ಬಂಧನವಾಗಿದೆ.
ಹತ್ತಾರು ಕೇಸ್ ನಲ್ಲಿ ಬಾಗಿಯಾಗಿರೋ ಈ ದಂಪತಿ ಕಳೆದ ಮಾರ್ಚ್ ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಮತ್ತೆ ಹಳೆ ಚಾಳಿಯನ್ನು ಮುಂದುವರೆಸಿ ಕಳ್ಳತನ ಮಾಡಿ ಜೈಲು ಸೇರಿದ್ದಾರೆ. ಸದ್ಯ ಆರ್ ಟಿನಗರ ಪೊಲೀಸರು ಬಂಧಿತರಿಂದ 8.5 ಲಕ್ಷ ಮೌಲ್ಯದ 193 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
Kshetra Samachara
05/10/2021 01:43 pm