ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ವೈದ್ಯನಿಗೆ ನಂಬಿಸಿ ಸುಮಾರು 66 ಲಕ್ಷ ವಂಚಿಸಿದ್ರು. ವಂಚಕರ ಬಳಿ ಹಣ ವಾಪಸ್ ಕೇಳಿದಾಗ ವೈದ್ಯನಿಗೆ ಲಾಡ್ಜ್‌ನಲ್ಲಿ ಯುವತಿಯರನ್ನ ಬಿಟ್ಟು ನಖಲಿ ಪೊಲೀಸ್ ರೇಡ್ ಮಾಡಿಸ್ರಿದ್ರು. ನಂತರ ಪೊಲೀಸ್ ಕೇಸ್ ಕ್ಲೀಯರ್ ಮಾಡಿಸುತ್ತೇವೆ ಅಂತ 50 ಲಕ್ಷ ಪೀಕಿದ್ದ ಖತರ್ನಾಕ್ ಗ್ಯಾಂಗ್‌ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಿ 24 ಲಕ್ಷ ಹಣ 25 ಗ್ರಾಂ ಚಿನ್ನ ಹಾಗೂ ನಕಲಿ ವಾಕಿಟಾಕಿಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕಲಬುರಗಿಯ ಆಳಂದದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಶಂಕರ್ ಬಾಬುರಾವ್ ನೀಡಿದ ದೂರಿನ ಮೇರೆಗೆ ನಾಗರಾಜ್, ಮಲ್ಲಿಕಾರ್ಜುನ್, ಮಧು ಬಸವರಾಜ್ ಹಾಗೂ ಹಮೀದ್‌ನನ್ನ ಬಂಧಿಸಿದ್ದಾರೆ. ಕಲಬುರಗಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಶಂಕರ್ ಮಗನಿಗೆ ರಾಜಧಾನಿಯ ಕಾಲೇಜು ಒಂದರಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಓಡಾಟ ನಡೆಸುತ್ತಿದ್ದ. ಹಲವು ಸಲ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ವೇಳೆ ಎಂಟು ವರ್ಷಗಳಿಂದ ಪರಿಚಿತನಾಗಿದ್ದ ಆರೋಪಿ ನಾಗರಾಜ್ ತಮ್ಮ ಮಗನಿಗೆ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆ ಪರಿಚಯಸ್ಥರಿದ್ದಾರೆ ಎಂದು ಶಂಕರ್‌ಗೆ ಹೇಳಿದ್ದ. ಪರಿಚಯಸ್ಥರಾಗಿದ್ದರಿಂದ ನಂಬಿಕೆ ಮೇರೆಗೆ ಕಳೆದ ವರ್ಷ ಹಂತ ಹಂತವಾಗಿ 66 ಲಕ್ಷ ಹಣ ಕೊಟ್ಟಿದ್ದರು. ಬಳಿಕ ಎಂಬಿಎಸ್ ಸೀಟು ಕೊಡಿಸದೆ ಹಣ ನೀಡದೆ ನಾಗರಾಜ್ ಆಟ ಆಡಿಸಿದ್ದ. ಕೆಲ ತಿಂಗಳ ಬಳಿಕ ವೈದ್ಯನ ಒತ್ತಡ ತಾಳಲಾರದೆ ಹಣ ನೀಡುವುದಾಗಿ ನಗರಕ್ಕೆ ಶಂಕರ್ ನನ್ನು ಆರೋಪಿ ಕರೆಯಿಸಿಕೊಂಡಿದ್ದ.
ಗಾಂಧಿನಗರದ ಲಾಡ್ಜ್ ನಲ್ಲಿ ಶಂಕರ್ಗೆ ಆರೋಪಿ ನಾಗರಾಜ್ ರೂಮ್ ಬುಕ್ ಮಾಡಿದ್ದ. ಪೂರ್ವನಿಯೋಜಿತದಂತೆ ಮಹಾರಾಷ್ಟ್ರ ಮೂಲದ ಲೈಂಗಿಕ ಕಾರ್ಯಕರ್ತೆಯರನ್ನು ಕರೆಯಿಸಿ ಮಧ್ಯರಾತ್ರಿ ಆರೋಪಿಯ ಅಣತಿಯಂತೆ ಇಬ್ಬರು ಶಂಕರ್ ಉಳಿದುಕೊಂಡಿದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ಆತನ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ರೂಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು ರೈಡ್ ಮಾಡಲಾಗಿದೆ ಎಂದಿದ್ದಾರೆ.
ಪಕ್ಕದ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ನಾಗರಾಜ್ ಹುಡುಗಿಯರು ಇರುವ ಶಂಕರ್ ಪೋಟೊವನ್ನು ಕ್ಲಿಕಿಸಿಕೊಂಡಿದ್ದಾನೆ. ಬಳಿಕ ಶಂಕರ್ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ರೈಡ್ ಮಾಡಿರುವ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಳ್ಳದಿರಲು 50 ಲಕ್ಷಕ್ಕೆ ಡೀಲ್ ಮಾಡಿಕೊಂಡಿರುವುದಾಗಿ ಹೇಳಿ ಹಣ ನೀಡುವಂತೆ ಆರೋಪಿಯು ಶಂಕರ್ ಗೆ ತಾಕೀತು ಮಾಡಿದ್ದಾನೆ. ಹಣ ನೀಡದೆ ಹೋದರೆ ನಿನ್ನನ್ನ ಬಂಧಿಸುತ್ತಾರೆ. ಆಗ ನಿನ್ನ ಮಾನ-ಮಾರ್ಯಾದೆ ಹೋಗಲಿದೆ ಎಂದು ಬೆದರಿಸಿದ್ದಾರೆ.
ಮರ್ಯಾದೆಗೆ ಅಂಜಿದ ಶಂಕರ್ ಊರಿಗೆ ಹೋಗಿ ಹಣ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಕಲಬುರಗಿಗೆ ತೆರಳಿ ಮನೆ ಪತ್ರದ ಆಧಾರದ ಮೇಲೆ ಖಾಸಗಿ ಬ್ಯಾಂಕ್ ನಲ್ಲಿ 50 ಲಕ್ಷ ಹಣ ಸಾಲ ಪಡೆದು ಆರೋಪಿಗಳ ಕೈಗೆ ಇಟ್ಟಿದ್ರು.
PublicNext
01/07/2022 09:14 pm