ಮಗಳನ್ನು ಕೊಂದು ದಂತವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಎರಡು ಕಾರಣಗಳಿಂದ ಈ ಘಟನೆ ನಡೆದಿರಬಹುದು ಎಂದು ತಿಳಿದುಬಂದಿದೆ. ಆ ಎರಡು ಕಾರಣಗಳಿಂದಾಗಿ ಖಿನ್ನೆತೆಗೊಳಗಾಗಿದ್ದ ದಂತವೈದ್ಯೆ ಮಗುವನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಸಾವಿಗೆ ಒಂದು ಕಾರಣ ಅಂತರ್ಜಾತಿ ಮದುವೆ. ಇನ್ನೊಂದು ಸೈಮಾ ಆಸೆ ಪಟ್ಟ ವಸ್ತುಗಳನ್ನ ಪತಿ ಕೊಡಿಸ್ತಿರಲಿಲ್ಲ ಅನ್ನೋದು. 12 ವರ್ಷದ ಹಿಂದೆ ನಾರಾಯಣಸ್ವಾಮಿ ಎಂಬುವರನ್ನ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಸೈಮಾರನ್ನು ಕುಟುಂಬದವರು ಸೇರಿಸ್ತಿರಲಿಲ್ಲ. ನಂತ್ರ ಕೆಲ ವರ್ಷಗಳ ಬಳಿಕ ಕುಟುಂಬದ ಜೊತೆ ಒಡನಾಟ ಹೊಂದಿದ್ರು.
ಆತ್ಮಹತ್ಯೆ ಮೊದಲು ತವರು ಮನೆಗೆ ಒಂದು ಪೂಜೆಯ ನಿಮಿತ್ತ ತೆರಳಿದ್ದ ವೇಳೆ ಸಂಬಂಧಿಕರು ಸೈಮಾರನ್ನ, ಬೇರೆ ಜಾತಿಯವನ ಮದುವೆ ಮಾಡಿಕೊಂಡಿದ್ದೀಯಾ. ಹಬ್ಬಕ್ಕೆ ಗಂಡನ ಕರೆದುಕೊಂಡು ಬರೋದಕ್ಕೆ ಆಗಲ್ಲ. ಯಾಕಂದ್ರೆ ಇಲ್ಲಿ ನಾವು ಬೇರೆ ಜಾತಿಯವರನ್ನು ನಮ್ಮ ಪೂಜೆಯ ಒಳಗೆ ಬಿಡುವುದಿಲ್ಲ ಎಂದು ಹೀಯಾಳಿಸಿದ್ರಂತೆ. ಈ ಕಾರಣಕ್ಕೆ ಸೈಮಾ ಖಿನ್ನೆತೆಗೊಳಗಾಗಿದ್ರು ಎಂದು ಹೇಳಲಾಗ್ತಿದೆ. ಇನ್ನೂ ಇದೇ ಸಮಯದಲ್ಲೇ ಸೈಮಾ ಕಾರು, ಐ ಫೋನ್ ಗೆ ಆಸೆ ಪಟ್ಟಿದ್ದಕ್ಕೆ ಪತಿ ನಾರಾಯಣ್ ನಿರಾಕರಿಸಿದ್ರಂತೆ. ಈ ಕಾರಣದಿಂದಲೂ ಸೈಮಾ ಮಗುವನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನ ಮೂಡಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
11/08/2022 05:14 pm