ಬೆಂಗಳೂರು : ಇವರು ಫ್ರೊಫೇಷನಲ್ ಕಳ್ಳರು. ಬೆಂಗಳೂರು , ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ದೇವಸ್ಥಾನಗಳನ್ನ ಟಾರ್ಗೆಟ್ ಮಾಡಿ, ಕಳ್ಳತನ ಮಾಡುತ್ತಿದ್ದರು. ಎರಡು ವರ್ಷಗಳ ಅಂತರದಲ್ಲಿ ಒಂದೇ ದೇವಸ್ಥಾನದಲ್ಲಿ ಮೂರು ಬಾರಿ ಚಿನ್ನಾಭರಣ ಕದ್ದು, 4ನೇ ಸಲ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.
ಇವರೇ ಚಿಕ್ಕಬಳ್ಳಾಪುರ ಜಿಲ್ಲೆ ಹನುಮಂತಪುರದ ಗಂಗರಾಜು, ಮಹೇಶ್, ನಂದಕುಮಾರ್ ಮತ್ತು ಲೋಕೇಶ್.
ಕಳೆದ ಆಗಸ್ಟ್ 17ರಂದು ದೇವನಹಳ್ಳಿ ಬೈಪಾಸ್ ರಸ್ತೆ ನಾಗದೇವರ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಖದೀಮರ ಜಾಡು ಪತ್ತೆಯಾಗಿತ್ತು. ಇವರ ಬಂಧನದಿಂದ ಚಿಕ್ಕಬಳ್ಳಾಪುರ, ಹೊಸಕೋಟೆಯ ಆವಲಹಳ್ಳಿ ಮತ್ತು ಈಗ ದೇವನಹಳ್ಳಿ ಕೇಸ್ ಗಳು ಪತ್ತೆಯಾಗಿವೆ. ಬಂಧಿತರಿಂದ 2 ಕೆ.ಜಿ ಚಿನ್ನ ಮತ್ತು ಬೆಳ್ಳಿಯ ಆಭರಣ ಪತ್ತೆಯಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
04/09/2022 02:56 pm