ಬೆಂಗಳೂರು: ಮಂಡ್ಯ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರ ಅಳಿಯ ಸ್ಯಾಂಡಲ್‌ವುಡ್ ನಟ ರಾಜೀವ್ ರಾಥೋಡ್ ಆಡಿ ಕಾರ್ ದರ್ಬಾರ್‌ಗೆ ವಿಜಯನಗರ ಸಂಚಾರ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಖಾಸಗಿ ಕಾರಿಗೆ ವಿಐಪಿ ಹಾರ್ನ್ ಅಳವಡಿಸಿ ಟ್ರಾಫಿಕ್‌ನಲ್ಲಿ ಹಾರ್ನ್ ಹಾಕಿಕೊಂಡು ಸಂಚಾರ ಮಾಡುತ್ತಿದ್ದ ರಾಜೀವ್ ಕಾರಿಗೆ ಬ್ರೇಕ್ ಬಿದ್ದಿದೆ. ರಾಜೀವ್ ಅವರು ಸಂಚಾರ ನಿಯಮ ಉಲ್ಲಂಘಿಸಿ ಕಾರಿಗೆ ಎಮರ್ಜೆನ್ಸಿ ಹಾರ್ನ್ ಅಳವಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಕಾರಿಗೆ ಎಂಎಲ್‌ಎ ಪಾಸ್ ಹಾಕಿಕೊಂಡು ಸಂಚಾರ ಮಾಡುತ್ತಿದ್ದ ವೇಳೆ ಸಾರ್ವಜನಿಕರು ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಕಾರನ್ನ ವಶಕ್ಕೆ ಪಡೆದ ಸಂಚಾರ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಎಮರ್ಜೆನ್ಸಿ ಹಾರ್ನ್ ಬಳಸಿದ್ದಕ್ಕೆ ಎರಡು ಸಾವಿರ ದಂಡ ಹಾಗೂ ಹಿಂದೆ ಇದ್ದ ಹನ್ನೆರಡು ಸಾವಿರ ಒಟ್ಟು 14 ಸಾವಿರ ದಂಡ ಕಟ್ಟಿಸಿ ಮಾಜಿ ಎಂಪಿ ಅಳಿಯನಿಗೆ ಮತ್ತೊಮ್ಮೆ ಈ ರೀತಿ ಮಾಡದಂತೆ ವಾರ್ನ್ ಮಾಡಿದ್ದಾರೆ.
PublicNext
17/08/2022 11:57 am