ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿ ಯಾರು ಊಹಿಸಿರದ ಘಟನೆ ನಡೆದುಹೋಗಿದೆ.
ತಂದೆ ಜೊತೆ ಮನೆ ಕಟ್ಟಬೇಕು ಎನ್ನುವ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದ ಗೊಟ್ಟಿಪುರ ನಿವಾಸಿ ಪ್ರತಾಪ್ (25) ಎಂಬ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಮನೆ ಕಟ್ಟಬೇಕೆಂದು ತಂದೆ ಜೊತೆ ಜಗಳದಿಂದ ಮನನೊಂದು ಆಗಸ್ಟ್ 9ರಂದು ಮನೆ ಬಿಟ್ಟೋಗಿದ್ದ ಪ್ರತಾಪ್. ಸಾಲ ಮಾಡಿಕೊಂಡಿದ್ದ ತಂದೆ ಮನೆ ಕಟ್ಟೊ ವಿಚಾರದಲ್ಲಿ ಆಗಲ್ಲ ಎಂದಿದ್ದರು. ಇದರಿಂದ ಬೇಸರವಾಗಿ ಪ್ರತಾಪ್ ಆತ್ಮಹತ್ಯೆ ಮಾಡಕೊಂಡಿದ್ದಾನೆ ಎನ್ನಲಾಗಿದೆ.
ಹೊಸಕೋಟೆ ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಅರಣ್ಯ ಪ್ರದೇಶದಲ್ಲಿ ದುರ್ವಾಸನೆ ಬರುವಾಗ ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಹೊಸಕೋಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹನ ಪೋಷಕರಿಗೆ ಒಪ್ಪಿಸಿದ್ದಾರೆ. ಇದ್ದ ಮಗನ ಕಳೆದುಕೊಂಡ ಕುಟುಂಬದ ದುಃಖ ಮತ್ಯಾರಿಗೂ ಬೇಡ.
PublicNext
12/08/2022 09:00 am