ಬೆಂಗಳೂರು: ಆ ಕಡೆ ಈ ಕಡೆ ನೋಡಿ ಅಂಗಡಿ ಮುಂದೆ ನಿಲ್ಲಿಸಿದ ಬೈಕ್‌ಅನ್ನ ಕ್ಷಣಾರ್ಧದಲ್ಲಿ ಕದ್ದಿದ್ದ ಕಳ್ಳ ಸ್ವಲ್ಪ ದೂರು ಹೋಗುವಾಗಲೇ ಪೊಲೀಸರಿಗೆ ಲಾಕ್ ಆಗಿದ್ದ. ಬೈಕ್ ಕದ್ದು 40 ನಿಮಿಷದಲ್ಲಿ ಕಳ್ಳ ಪೊಲೀಸರಿಗೆ ಲಾಕ್ ಆಗಿದ್ದಾನೆ.
ಸ್ನೇಹಿತರೊಂದಿಗೆ ಜಯನಗರ 24ನೇ ಮುಖ್ಯರಸ್ತೆಯಲ್ಲಿ ತ್ರಿಬಲ್ ರೈಡ್ ಹೋಗಿ ಆಕ್ಸಿಡೆಂಟ್ ಮಾಡಿದ್ದ ಕಳ್ಳ. ಆಕ್ಸಿಡೆಂಟ್‌ನಿಂದ ಶುರುವಾದ ಜಗಳವನ್ನು ಬಿಡಿಸಲು ಸಂಚಾರಿ ಪೊಲೀಸ್ ಎಂಟ್ರಿ ಕೊಟ್ಟಿದ್ದರು. ಈ ವೇಳೆ ವಾಹನ ತಪಾಸಣೆ ವೇಳೆ ಆಕ್ಸಿಡೆಂಟ್ ಮಾಡಿದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದೆಂದು ಪತ್ತೆಯಾಗಿದೆ.
ಕದ್ದಿರೋ ಗಾಡಿ ಅಂತ ಪೊಲೀಸ್ರಿಗೆ ಗೊತ್ತಾಗುತ್ತಿದ್ದಂತೆ ಕಳ್ಳರು ಎಸ್ಕೇಪ್ ಆಗಿದ್ದಾರೆ. ಸದ್ಯ ಕಳ್ಳತನ ಕುರಿತಂತೆ ಜಯನಗರ ಪೊಲೀಸ್ರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
PublicNext
14/07/2022 07:19 pm