ಬೆಂಗಳೂರು : ತಲೆಗೆ ಹೆಲ್ಮೆಟ್ ಹಾಕೊಂಡು ಟ್ರಾಫಿಕ್ ರೂಲ್ಸ್ ನ್ನು ಕಟ್ಟುನಿಟ್ಟಾಗಿ ಫಾಲೋ ಮಾಡಿದ್ರು ಒಮ್ಮೊಮ್ಮೆ ಆಕ್ಸಿಡೆಂಟ್ ಆಗಿ ಬಿಡುತ್ತದೆ. ಆದರೆ ಇವರು ಬೈಕ್ ಬೇಕಾದಂಗೆ ಬದಲಾಯಿಸಿಕೊಂಡು ಡೆಡ್ಲಿ ವೀಲಿಂಗ್ ಮಾಡ್ತಾ ಇದ್ದಾರೆ.
ಇನ್ನು ಇಷ್ಟು ದಿನ ಮುಖ್ಯರಸ್ತೆ, ಹೈವೇಗಳಲ್ಲಿ ವೀಲಿಂಗ್ ಮಾಡಿಕೊಂಡು ಪುಂಡಾಟ ಮಾಡುತ್ತಿದ್ದ ಹುಡುಗರು ಈಗ ಗಲ್ಲಿ, ರೋಡ್ ಗಳಿಗೆ ಎಂಟರ್ ಆಗಿದ್ದಾರೆ.ಇಲ್ಲಿನ ನಿವಾಸಿಗಳಿಗೆ ಬೆಳಗಾದರೆ ಸಾಕು ವಾಕಿಂಗ್ ಮಾಡಲು ಕೂಡ ಭಯ ಪಡುವಂತಾಗಿದೆ. ರಾತ್ರಿಯಾದರೆ ಸಾಕು ಬೈಕ್ ಶಬ್ದಕ್ಕೆ ಇವರ ನಿದ್ದೆ ಹಾಳಾಗಿ ಹೋಗ್ತಾ ಇದೆ.
ನೋಡಿ ಸರಿಯಾಗಿ ಈ ವಿಡಿಯೋವನ್ನು ಒಮ್ಮೆ ನೋಡಿ ರಸ್ತೆ ಮೇಲೆ ಇಬ್ಬರು ನಡೆದುಕೊಂಡು ಬರುತ್ತಾ ಇರುತ್ತಾರೆ ಅವರ ಹಿಂದೆಯೇ ವೀಲಿಂಗ್ ಮಾಡಿಕೊಂಡು ಬರುತ್ತಿರುವ ಪುಂಡ.
ವೀಲಿಂಗ್ ಮಾಡಿಕೊಂಡು ಬಂದು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗಳನ್ನು ಗುದ್ದಲು ಜಸ್ಟ್ ಮಿಸ್. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿನ ಬಿಟಿಎಂ ಲೇಔಟ್ ಮೊದಲನೇ ಹಂತದ 27 ನೇ ಮುಖ್ಯರಸ್ತೆಯಲ್ಲಿ. ದಿನನಿತ್ಯ ಲೇಔಟ್ ನ ಜನ ವೀಲಿಂಗ್ ಪುಂಡರಿಂದ ಬೇಸತ್ತಿದ್ದಾರೆ.
ಕೂಡಲೇ ಪೊಲೀಸರು ದಿನನಿತ್ಯ ವಿಲಿಂಗ್ ಮಾಡಿ ತೊಂದರೆ ಕೊಡುತ್ತಿರುವ ಪುಂಡರನ್ನು ಬಂಧಿಸಿ ಕ್ರಮ ಕೈಗೊಳ್ಳುವ ಮೂಲಕ ಈ ಏರಿಯಾದ ಜನರಿಗೆ ವೀಲಿಂಗ್ ಕಿರಿಕಿರಿಯಿಂದ ಮುಕ್ತಿ ನೀಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
16/06/2022 06:06 pm