ಆನೇಕಲ್ : ವೆಂಚುರಾ ಮೈನಿಂಗ್ಸ್ (ಜಲ್ಲಿಕ್ರಷರ್ ) ವಿರುದ್ಧ ಇಂಡ್ಲವಾಡಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ್ ಜಲ್ಲಿ ಕ್ರಷರ್ ವಿರುದ್ಧ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು ಇಂಡ್ಲವಾಡಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಡಿಓ ಬಸವರಾಜ್ ರವರ ನಕಲಿ ಸಹಿ ಹಾಗೂ ಫೋರ್ಜರಿ ಲೈಸೆನ್ಸ್ ಪಡೆದು ವೆಂಚುರಾ ಮೈನಿಂಗ್ ನವರು ಜಲ್ಲಿ ಕ್ರಷರ್ ನಡೆಸಲಾಗಿತ್ತು.
ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತದ್ದು , ಆನೇಕಲ್ ಪೊಲೀಸ್ ಠಾಣೆಯಲ್ಲಿ ಪಿಡಿಓ ದೂರು ಸಹ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡ್ಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಟ್ಟಪ್ಪ ಜನರಲ್ ಲೈಸೆನ್ಸ್ ಜಲ್ಲಿ ಕ್ರಷರ್ ಗೆ ಅನುಮತಿಯನ್ನು ನಾನು ಕೊಟ್ಟಿಲ್ಲ ಹಿಂದೆ ಕೊಟ್ಟಿರಬಹುದು ಏನೋ ಗೊತ್ತಿಲ್ಲ ಎಂದು ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾರೆ.
ಒಟ್ಟಾರೆಯಲ್ಲಿ ಪಿಡಿಓ ನೀಡಿದ ದೂರಿನ ಮೇಲೆ ಖಾಕಿ ಪಡೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Kshetra Samachara
07/05/2022 12:48 pm