ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕ ಸಿಇಎನ್ ಪೊಲೀಸರಿಂದ PayTM ವಂಚಕನ ಬಂಧನ

ಬೆಂಗಳೂರು: ಪೇಟಿಎಂ ಫಾರ್ ಬ್ಯುಸಿನೆಸ್ ಆ್ಯಪ್ ಮೂಲಕ ವಂಚನೆ ಪ್ರಕರಣದ ಪ್ರಮುಖ ಆರೋಪಿ ದೀಪನ್ ಚಕ್ರವರ್ತಿ ಎಂಬಾತನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈತನ ವಂಚನೆ ಸಂಬಂಧ ಈಶಾನ್ಯ ವಿಭಾಗದ ಸಿಇಎನ್ ಠಾಣೆಲಿ ಕಳೆದ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ದೀಪನ್ ಮೊದಲು ಪೇಟಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗ್ರಾಹಕರಿಗೆ ಆ್ಯಪ್ ಇನ್ಸ್ಟಾಲ್ ಮಾಡಿಕೊಡುವಾಗ ಪಾಸ್ವರ್ಡ್ ತಿಳಿದುಕೊಳ್ತಿದ್ದ. ಪೇಟಿಎಂನಲ್ಲಿ ಕೆಲಸ ಬಿಟ್ಟ ನಂತರ ಪಾಸ್ವರ್ಡ್‌ಗಳನ್ನ ಬಳಸಿಕೊಂಡು ವಂಚನೆಗಿಳಿದಿದ್ದ.

ಡೆಪಾಸಿಟ್ ಇಟ್ಟರೆ ಕ್ಯಾಶ್‌ಬ್ಯಾಕ್ ಬರುವುದಾಗಿ ಗ್ರಾಹಕರನ್ನ ನಂಬಿಸುತ್ತಿದ್ದ. ಬಳಿಕ ತನ್ನದೇ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚನೆ ಮಾಡುತ್ತಿದ್ದ. ಯಲಹಂಕದ ಸಿಇಎನ್ ಪೊಲೀಸರು ಪ್ರಕರಣದ ಹಿನ್ನೆಲೆ ಈತನನ್ನು ಬಂಧಿಸಿದ್ದರು. ಈ ವೇಳೆ ಪತ್ನಿಯ ಚಿಕಿತ್ಸೆಯ ಹಣಕ್ಕಾಗಿ ಈ ರೀತಿ ಕೃತ್ಯ ಮಾಡುತ್ತಿರುವುದಾಗಿ ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಈತನ ಬಂಧನದಿಂದ ಅನೇಕ‌ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

02/03/2022 08:32 pm

Cinque Terre

2.7 K

Cinque Terre

0