ಬೆಂಗಳೂರು: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಎಸಿಬಿ ದಾಳಿ ಇವತ್ತು ಮುಂದುವರೆದಿದೆ. ಟಿಡಿಅರ್, ಜಾಹೀರಾತು ವಿಭಾಗ, ಘನತಾಜ್ಯ ನಿರ್ವಹಣೆ ಕಚೇರಿಗಳ ಮೇಲೆ ದಾಳಿ ಮುಂದುವರಿದಿದೆ. ಕಡತ ಪರಿಶೀಲನೆ ಕಾರ್ಯ
ನಡೆಯುತ್ತಿದ್ದು, ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳಿವೆ.
ಸತತ ಎರಡನೇ ದಿನವೂ ದಾಳಿ ಮುಂದುವರೆದಿದ್ದು, ಕಡತಗಳ ಇಂಚಿಂಚು ಪರಿಶೀಲನೆಯಿಂದ ಪಾಲಿಕೆ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ. ಎಸಿಬಿ ದಾಳಿಯ ದಿನದಿಂದ ಕಚೇರಿಯತ್ತ ಹಿರಿಯ ಅಧಿಕಾರಿಗಳು ತಲೇನೆ ಹಾಕಿಲ್ಲ. ನಾನಾ ಕಾರಣ ಹೇಳಿ ಕಚೇರಿಯತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.
PublicNext
28/02/2022 05:08 pm