ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೈಲು ಪಾಲಾಗಿರೋ ವಕೀಲ ಜಗದೀಶ್ ಮೇಲೆ ʼಕೇಸುಗಳ ಸರಮಾಲೆʼ

ಬೆಂಗಳೂರು: ನಿತ್ಯ ಫೇಸ್ ಬುಕ್ ನಲ್ಲಿ ಆಗಾಗ ಲೈವ್ ಬರ್ತಿದ್ದ ವಕೀಲ‌ ಜಗದೀಶ್ ಗೆ ಶಾಕ್ ಮೇಲೆ ‌ಶಾಕ್ ಆಗ್ತಿದೆ. ‌ಸದ್ಯ, ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.‌ ಈಗಾಗಲೇ ಜಗದೀಶ್ ಬಳಸುತ್ತಿದ್ದ 18 ಫೇಸ್ ಬುಕ್, ಇನ್ ಸ್ಟಾ ಗ್ರಾಮ್ ಅಕೌಂಟ್ ನ್ನು ಪೊಲೀಸ್ರು ಬ್ಲಾಕ್ ಮಾಡಿಸಿದ್ದಾರೆ. ಜೈಲಲ್ಲಿರೋ ಜಗದೀಶ್ ಪರವಾಗಿ ಯಾವ ವಕೀಲರೂ ವಕಾಲತ್ತು ನಡೆಸದಂತೆ ಮೀಟಿಂಗ್ ಕೂಡ ಆಗಿದೆಯಂತೆ.‌

ಇನ್ನು, ಜಗದೀಶ್ ಜೈಲು ಸೇರ್ತಿದ್ದಂತೆ ಜಗದೀಶ್ ಮಗನ ಮೇಲೂ ಹಲ್ಲೆ ಕೇಸ್ ಸಂಬಂಧ‌ ಎಫ್ ಐಆರ್ ದಾಖಲಾದಂತೆ ಜಗದೀಶ್, ಕಮಿಷನರ್ ಕಚೇರಿಗೆ ಬಂದಾಗ ಸಿಬ್ಬಂದಿಗೆ ಏರುಧ್ವನಿಯಲ್ಲಿ ಮಾತನಾಡಿದ್ದು, ಸಿಬ್ಬಂದಿಗೆ ಬೈದಿದ್ದಾರೆಂದು ವಿಧಾನಸೌಧ ಠಾಣೆಯಲ್ಲಿ ಎಫ್ ಐಆರ್ ಕೂಡ ಆಗಿದೆ.

ಇದ್ರ ಜೊತೆಗೆ ಕೆಎಸ್ ಆರ್ ಟಿಸಿ ನಿವೃತ್ತ ಉದ್ಯೋಗಿಗೆ ಜಾತಿ ನಿಂದನೆ ಮತ್ತು ಹಲ್ಲೆ ಆರೋಪದಡಿ ಮತ್ತೊಂದು ಕೇಸ್ ದಾಖಲಾಗಿದೆ.

ಮುತ್ತಯ್ಯ ಎಂಬವರು ನೀಡಿದ ದೂರಿನನ್ವಯ ಕೋಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ಜಗದೀಶ್ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿಈ ಆರೋಪಕ್ಕೆ ಕಾರಣದ ಬಗ್ಗೆ ಮಾಹಿತಿ ಪಡೆಯಲು ಜಗದೀಶ್ ಮನೆಗೆ ಹೋಗಿದ್ದಾಗ ಮುತ್ತಯ್ಯ ಅವರಿಗೆ ಜಾತಿ ಬಗ್ಗೆ ಪ್ರಶ್ನಿಸಿ, ಅವಾಚ್ಯವಾಗಿ ನಿಂದಿಸಿದ್ರು ಎಂದು ಆರೋಪಿಸಲಾಗಿದೆ.

Edited By :
PublicNext

PublicNext

15/02/2022 06:02 pm

Cinque Terre

15.95 K

Cinque Terre

3

ಸಂಬಂಧಿತ ಸುದ್ದಿ