ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಟ್ ಕಾಯಿನ್ ನಮ್ಮ ವ್ಯಾಲೆಟ್‌ನಲ್ಲಿ ಭದ್ರವಾಗಿದೆ: ಬೆಂಗಳೂರು ಪೊಲೀಸ್ ಕಮಿಷನರೇಟ್ ಸ್ಪಷ್ಟನೆ

ಬೆಂಗಳೂರು: 0.08 ಬಿಟ್ ಕಾಯಿನ್ ಪೊಲೀಸ್ ವ್ಯಾಲೆಟ್ ನಲ್ಲಿ ಭದ್ರವಾಗಿದೆ. ರಾಬಿನ್ ಖಂಡೇಲ್ ವಾಲಾ ನ ಅಕೌಂಟ್ ನಿಂದ ಜಪ್ತಿ‌ಮಾಡಿದ ಉಳಿದ ಮೂರು ರೀತಿಯ ಕ್ರಿಪ್ಟೋ ಕರೆನ್ಸಿಗಳ ಜೊತೆಯಲ್ಲೆ ಇದು ಕೂಡ ಇದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯು ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದೆ.

ನ್ಯಾಯಾಲಯದ ಸಮಕ್ಷದಲ್ಲಿ 0.08 ಬಿಟ್ ಕಾಯಿನ್ಅನ್ನು ಜೋಪಾನವಾಗಿ ಪೊಲೀಸ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. 2.50 ಲಕ್ಷ ಮೌಲ್ಯದ ಬಿಟ್ ಕಾಯಿನ್ ಪೊಲೀಸ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟು ಮೂರು ವಿಧದ ಕ್ರಿಪ್ಟೋ ಕರೆನ್ಸಿಯನ್ನ ನ್ಯಾಯಾಲಯದ ಸಮಕ್ಷಮದಲ್ಲಿ ಜಪ್ತಿ ಮಾಡಲಾಗಿದೆ. ಯುನೋಕಾಯಿನ್ ಎಂಬುದು ಕ್ರಿಫ್ಟೋ ಕರೆನ್ಸಿಯಲ್ಲ. ಯುನೋಕಾಯಿನ್ ಒಂದು ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕಂಪನಿಯಾಗಿದೆ. ಪ್ರಕರಣದ ತನಿಖೆಯಲ್ಲಿ ಯುನೋಕಾಯಿನ್ ಕಂಪನಿಯವರ ಸಲಹೆ ಪಡೆಯಲಿದ್ದೇವೆ. ಸಣ್ಣ ಪ್ರಮಾಣದ ಹಣಕ್ಕಾಗಿ ಯುನೋಕಾಯಿನ್ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ. ಪ್ರಕರಣದಲ್ಲಿ ಯುನೋಕಾಯಿನ್ ಅಪರಾಧಿಯಲ್ಲ ಅದು ಸಂತ್ರಸ್ತ ಕಂಪನಿ ಎಂದು ಬೆಂಗಳೂರು ಪೊಲೀಸ್ ಕಮಿಷ್ನರೇಟ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Edited By : Nagaraj Tulugeri
Kshetra Samachara

Kshetra Samachara

18/11/2021 05:09 pm

Cinque Terre

514

Cinque Terre

1