ಇತ್ತೀಚೆಗೆ ನೆಲಮಂಗಲ ಟೋಲ್ ಬಳಿ ಕಾರೊಂದು ಬಂದಾಗ ಟೋಲ್ ಹಣ ಕಟ್ಟುವಂತೆ ಸೂಚಿಸಲಾಗಿತ್ತು. ಈ ವೇಳೆ ಟೋಲ್ ಹಣ ಕೇಳಿದ್ದೇ ತಪ್ಪು ಎನ್ನುವಂತೆ ಕಾರಿನಿಂದ ಫಿಲಂ ನಲ್ಲಿನ ರೌಡಿಗಳು ಇಳಿದು ಬರುವಂತೆ ಕೆಳಗೆ ಇಳಿದು ಬಂದ ಆಸಾಮಿ ಟೋಲ್ ಸಿಬ್ಬಂದಿಗೆ ಕಾಲಿನಿಂದ ಒದ್ದು ಸೀನ್ ಕ್ರಿಯೇಟ್ ಮಾಡಿದ್ದ!
ಇವನ ಹಿಂದೆಯೇ ಬಂದ ಸಹಚರರು ಟೋಲ್ ಸಿಬ್ಬಂ ದಿಯನ್ನ ಅಟ್ಟಾಡಿಸಿ ಸಿಕ್ಕ ಸಿಕ್ಕಲ್ಲಿ ಹೊಡೆದು, ಹಲ್ಲೆ ನಡೆಸಿರೋ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿತ್ತು.
ಮೊದಲಿಗೆ ಕಾರಿನಿಂದ ಇಳಿದು ಬಂದು ಹಲ್ಲೆ ನಡೆಸಿದಾತ ಗಂಗಮ್ಮನಗುಡಿ ಪೊಲೀಸ್ ಠಾಣೆಯ ರೌಡಿ ಶೀಟರ್ ಶಿವಕುಮಾರ್ ಮತ್ತು ಲೋಕೇಶ್ ಅಂತಾ ಗುರ್ತಿಸಲಾಗಿದ್ದು, ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ. ಉಳಿದಂತೆ ಸೂರ್ಯ, ಶ್ರೀನಿವಾಸ್, ಶರಣು ಬಸಪ್ಪ , ರಮೇಶ್, ಶ್ರೀನಿವಾಸ್ , ಗಂಗಣ್ಣ , ನರಸಿಂಹಮೂರ್ತಿ ಎಂದು ಗುರ್ತಿಸಲಾಗಿದೆ. ಎರಡು ಕಾರುಗಳಲ್ಲಿದ್ದ 9 ಮಂದಿ ಆರೋಪಿಗಳು ಏಕಾಏಕಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ರು.
ಪ್ರಕರಣ ದಾಖಲಿಸಿದ್ದ ನೆಲಮಂಗಲ ಗ್ರಾಮಾಂತರ ಪೊಲೀಸ್ರು ನರಸಿಂಹಮೂರ್ತಿ ಹಾಗು ಶರಣುವನ್ನ ಬಂಧಿಸಿದ್ರೆ, ಕೆಲವರು ಕೋರ್ಟ್ ನಿಂದ ಜಾಮೀನು ಪಡೆದಿದ್ದಾರೆ. ಇನ್ನುಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಈ ಆರೋಪಿಗಳು ರೌಡಿ ಶೀಟರ್ ಆಟೋರಾಮನ ಶಿಷ್ಯಂದಿರು ಎಂದು ಹೇಳಲಾಗ್ತಿದೆ.
PublicNext
29/03/2022 11:46 am